ಹೊಸದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದದ ಬೆನ್ನಲ್ಲೇ ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಗ್ಯಾರಂಟಿ ವಿವಾದ ಜೋರಾಗಿದೆ. ಮಲ್ಲಿಕಾರ್ಜುನ ಖರ್ಗೆ ಅವರ ಆಶ್ವಾಸನೆ ಹೇಳಿಕೆಯನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ಬಿಜೆಪಿ ನಾಯಕರು ಕಾಂಗ್ರೆಸ್ ಸರ್ಕಾರವನ್ನು ವಿರೋಧಿಸಿದರು.
ಈ ವಿಚಾರವಾಗಿ ವಿಪಕ್ಷ ನಾಯಕ ಆರ್.ಅಶೋಕ್ ಕೈ ನಾಯಕರ ವಿರುದ್ಧ ಕಿಡಿಕಾರಿದ್ದಾರೆ. ಖಾತರಿ ವ್ಯವಸ್ಥೆಗಳು ಅವೈಜ್ಞಾನಿಕವಾಗಿವೆ. ಖರ್ಗೆ ಅವರೇ ಬಜೆಟ್ ನೋಡಿ ಗ್ಯಾರಂಟಿ ಘೋಷಣೆ ಮಾಡಬೇಕಿತ್ತು. ಹುಚ್ಚರ ಥರ ಐದಾರು ಗ್ಯಾರಂಟಿ ಘೋಷಣೆ ಮಾಡಬೇಡಿ ಎಂದು ಮಹಾರಾಷ್ಟ್ರದ ಜನರಿಗೆ ಹೇಳಿದ್ದೇನೆ ಎಂದು ಖರ್ಗೆ ಹೇಳಿದ್ದಾರೆ. ಕರ್ನಾಟಕ ಕಾಂಗ್ರೆಸ್ ನವರು ಹುಚ್ಚರು ಅಂತ ಸಬಿತಾಯ್ತಲ್ಲಎಂದು ವ್ಯಂಗ್ಯವಾಡಿದ್ದಾರೆ.