ರಾಮಮಂದಿರ ಪುನಶ್ಚೇತನಕ್ಕೆ ಕಾಂಗ್ರೆಸ್ ಮುಂದಾಗಿರುವುದು ಸ್ವಾಗತ: ಬಿ.ವೈ. ವಿಜಯೇಂದ್ರ

ಹೊಸದಿಗಂತ ವರದಿ,ವಿಜಯಪುರ:

ರಾಮನ ಅತ್ಯುತ್ತಮ ವ್ಯಕ್ತಿತವನ್ನು ಪ್ರಶ್ನೆ ಮಾಡುವ ಕಾಂಗ್ರೆಸ್, ರಾಮಮಂದಿರ ಪುನಶ್ಚೇತನಕ್ಕೆ ಮುಂದಾಗಿರುವುದು ಸ್ವಾಗತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಳ್ಳೆಯ ಕೆಲಸ ಮಾಡುತ್ತಿರುವವರಿಗೆ ನಾವು ಹಾರೈಸುತ್ತೇವೆ ಎಂದರು.

ರಾಜ್ಯದಲ್ಲಿ ನೂರು ರಾಮಮಂದಿರ ಪುನಶ್ಚೇಚೇತನ ಮಾಡಲು ಸರ್ಕಾರ ತೀರ್ಮಾನ ಮಾಡುತ್ತಿರುವ ವಿಚಾರವನ್ನು ಸ್ವಾಗತಿಸಿ, ಭಗವಾನ್ ರಾಮನನ್ನ ಅವರು ಒಪ್ಪಿಕೊಂಡಿರುವುದು ತುಂಬಾ ಸಂತೋಷಕರ ಎಂದರು.

ಬೆಳಗಾವಿ ಎಂ‌. ಕೆ‌. ಹುಬ್ಭಳ್ಳಿಯಲ್ಲಿ ಭಗವಾ ಧ್ವಜ ವಿಚಾರ‌ ಗಲಾಟೆ ಕುರಿತು ಪ್ರತಿಕ್ರಿಯಿಸಿ, ಮಂಡ್ಯದಲ್ಲಿ ಭಗವಾ ಧ್ವಜ ಗಲಾಟೆ ವಿಚಾರ ಕಾಂಗ್ರೆಸ್ ಸರ್ಕಾರದ ಪಿತೂರಿಯಾಗಿತ್ತು,
ಹನುಮ ಧ್ವಜ ಹಾರಿಸಲು ಗ್ರಾಮ ಪಂಚಾಯಿತಿಯಿಂದ ಅನುಮತಿ ಪಡೆದು ಧ್ವಜ ಸ್ತಂಭನಿರ್ಮಾಣ ಮಾಡಲಾಗಿತ್ತು.
ಈ ಘಟನೆ ನಾವು ಭಾರತದಲ್ಲಿದ್ದೇವಾ ಅಥವಾ ಬೇರೆ ದೇಶದಲ್ಲಿದ್ದೇವೆ ಎಂಬ ಅನುಮಾನ ಉಂಟು ಮಾಡಿತ್ತು.ಅಲ್ಪಸಂಖ್ಯಾತ ಓಲೈಕೆ ಕಾರಣದಿಂದ ಅಮ್ಮ ಅನ್ನುವ ಧ್ವಜ ಹಾರಿಸಲು ಅವರು ಪ್ರಶ್ನೆ ಮಾಡುತ್ತಾರೆ, ಕಾಂಗ್ರೆಸ್ ನವರಿಗೆ ಅಧಿಕಾರ ಮದದಿಂದ ಹೀಗೆ ಮಾಡಿದ್ದಾರೆ ಎಂದು ದೂರಿದರು.

ಸಿದ್ದಗಂಗಾ ಶ್ರೀಗಳಿಗೆ ಭಾರತ ರತ್ನ ಪ್ರದಾನ ಮಾಡುವ ವಿಚಾರ ಹಿಂದಿನಿಂದಲೂ ಈ ಕುರಿತು ಚರ್ಚೆ ನಡೆಯುತ್ತಿದೆ, ಎಲ್ಲದಕ್ಕೂ ಸಮಯ ಕೂಡಿ ಬರಬೇಕು. ಮುಂಬರುವ ದಿನಗಳಲ್ಲಿ ಒಳ್ಳೆಯದಾಗುತ್ತದೆ ಎಂದರು.

ಎಐಸಿಸಿ ಅಧ್ಯಕ್ಷ ಖರ್ಗೆ ಬಿಜೆಪಿ ಸೇರ್ಪಡೆಯಾಗುತ್ತಾರೆಂಬ ವಿಚಾರ ಬಗ್ಗೆ ಪ್ರತಿಕ್ರಿಯಿಸಿ, ಇಡೀ ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಉಂಟಾಗಿದೆ.
ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿ ಆಗಬೇಕೆಂಬ ಮತದಾರರ ಆಶಯ.ಇದು ಎಲ್ಲೆಡೆ ವ್ಯಕ್ತವಾಗುತ್ತಿದೆ.ಮೊನ್ನೆ ಖರ್ಗೆ ಅವರ ಬಾಯಲ್ಲೂ ಕೂಡ ಬಿಜೆಪಿ 400ಕ್ಕೂ ಅಧಿಕ ಸ್ಥಾನ ಬರುತ್ತವೆ ಎಂಬ ಮಾತು ಬಂದಿದೆ,ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗುತ್ತಾರೆಂಬ ಮಾತು ಖರ್ಗೆ ಅವರ ಬಾಯಿಂದ ಬಂದಿದೆ.ಸತ್ಯದ ಅರಿವು ಎಲ್ಲರಿಗೂ ಆಗಿದೆ.ಅದೇ ರೀತಿ ಕಾಂಗ್ರೆಸ್ ರಾಷ್ಟ್ರಾಧ್ಯಕ್ಷರಿಗೂ ಆಗಿದೆ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!