ಹಳ್ಳಕ್ಕೆ ಉರುಳಿದ ಕಾರು: ಮೂವರು ಯುವಕರ ದುರ್ಮರಣ

ಹೊಸದಿಗಂತ ವರದಿ, ಕೆ.ಆರ್. ಪೇಟೆ :

ರಸ್ತೆ ಬದಿಯ ಹಳ್ಳಕ್ಕೆ ಕಾರು ಉರುಳಿ ಬಿದ್ದು ಮೂವರು ಯುವಕರು ದುರ್ಮರಣಕ್ಕೀಡಾಗಿರುವ ಘಟನೆ ತಾಲೂಕಿನ ಅಕ್ಕಿ ಹೆಬ್ಬಾಳು ಬಳಿ ನಡೆದಿದೆ.

ಕೆ ಆರ್ ಪೇಟೆ ಪಟ್ಟಣದ ಅನಿಚಿತ್, ಪವನ್ ಶೆಟ್ಟಿ ಹಾಗೂ ಚಿರು ಸಾವನಪ್ಪಿದ ದುರ್ದೈವಿ ಯುವಕರಾಗಿದ್ದಾರೆ. ಶನಿವಾರ ರಾತ್ರಿ ಮೂವರು ಹೋಂಡಾ ಸಿಟಿ ಕಾರಿನಲ್ಲಿ ಕೆ ಆರ್ ಪೇಟೆ -ಭೇರ್ಯ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದಾಗ ಅಕ್ಕಿ ಹೆಬ್ಬಾಳು ಸೇತುವೆ ಬಳಿ ನಿಯಂತ್ರಣ ತಪ್ಪಿದ ಕಾರು ಹಳ್ಳಕ್ಕೆ ಉರುಳಿ ಬಿದ್ದಿದೆ.

ತಕ್ಷಣ ಸ್ಥಳೀಯರು ರಕ್ಷಣೆಗೆ ಮುಂದಾದರಾದರೂ ತೀವ್ರ ಗಾಯಗೊಂಡಿದ್ದ ಮೂವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು.
ಕೆ ಆರ್ ಪೇಟೆ ಗ್ರಾಮಾಂತರ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ ಮೃತ ದೇಹಗಳನ್ನು ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ.
ಕೆಆರ್ ಪೇಟೆ ಪಟ್ಟಣದ ಮೂವರು ಯುವಕರು ಅಪಘಾತದಲ್ಲಿ ದುರ್ಮರಣಕ್ಕೀಡಾದ ಹಿನ್ನೆಲೆಯಲ್ಲಿ ಶೋಕ ಮಡುಗಟ್ಟಿದ್ದು, ಮೃತರ ಮನೆಯವರ ಆಕ್ರಂದನ ಮುಗಿಲು ಮುಟ್ಟಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!