ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಕಾಂಗ್ರೆಸ್ ನೀಡಿದ್ದ ಹಕ್ಕುಚ್ಯುತಿ ನೊಟೀಸ್ ನ್ನು ರಾಜ್ಯಸಭಾಧ್ಯಕ್ಷ ಜಗದೀಪ್ ಧನಕರ್ ಗುರುವಾರ ತಿರಸ್ಕರಿಸಿದ್ದಾರೆ.
ಕಾಂಗ್ರೆಸ್ ಸಂಸದೀಯ ಪಕ್ಷದ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರ ವಿರುದ್ಧ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅಮಿತ್ ಶಾ ವಿರುದ್ಧ ಹಕ್ಕುಚ್ಯುತಿ ನೋಟಿಸ್ ಸಲ್ಲಿಸಿದ್ದರು.
ಮಾರ್ಚ್ 25 ರಂದು ರಾಜ್ಯಸಭೆಯಲ್ಲಿ 2024 ರ ವಿಪತ್ತು ನಿರ್ವಹಣಾ ಮಸೂದೆಯ ಮೇಲಿನ ಚರ್ಚೆಗೆ ಉತ್ತರಿಸುವಾಗ ಹೇಳಿಕೆಗಳನ್ನು ನೀಡಿದ್ದ ಅಮಿತ್ ಶಾ ಅವರು ತಮ್ಮ ಹೇಳಿಕೆಯನ್ನು ದೃಢೀಕರಿಸಲು ಒಪ್ಪಿಕೊಂಡಿದ್ದಾರೆ ಎಂದು ರಾಜ್ಯಸಭಾಧ್ಯಕ್ಷ ಧನಕರ್ ಹೇಳಿದ್ದಾರೆ.
ನಾನು ಅದನ್ನು ಕೂಲಕಂಷವಾಗಿ ಪರಿಶೀಲಿಸಿದ್ದು ಅದರಲ್ಲಿ ಯಾವುದೇ ಉಲ್ಲಂಘನೆ ನಡೆದಿಲ್ಲ ಎಂದು ಸಭಾಧ್ಯಕ್ಷ ಧನಕರ್ ಹೇಳಿ ವಿಶೇಷಾಧಿಕಾರ ಉಲ್ಲಂಘನೆ ಸೂಚನೆಯನ್ನು ಇಂದು ಸದನದಲ್ಲಿ ತಿರಸ್ಕರಿಸಿದರು.