ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಲ್ಕು ರಾಜ್ಯಗಳ ಚುನಾವಣಾ ಮತ ಎಣಿಕೆ ಭರದಿಂದ ಸಾಗುತ್ತಿದ್ದು, ತೆಲಂಗಾಣ, ಛತ್ತಿಸ್‌ಗಡದಲ್ಲಿ ಕಾಂಗ್ರೆಸ್ ಮುನ್ನಡೆ ದಾಖಲಿಸುತ್ತಿದೆ.
ಅಧಿಕಾರಕ್ಕೆ ಬರಲು ಕರ್ನಾಟಕದಲ್ಲಿ ಅನುಸರಿಸಿದ ‘ಗ್ಯಾರಂಟಿ’ ತಂತ್ರವನ್ನು ಕಾಂಗ್ರೆಸ್ ತೆಲಂಗಾಣದಲ್ಲಿಯೂ ಅಖಾಡಕ್ಕಿಳಿಸಿದ್ದು, ಜೊತೆಗೆ ಕರ್ನಾಟಕದ ಮುಖಂಡರೂ ನಡೆಸಿದ ಫೀಲ್ಡ್ ವರ್ಕ್ ಮತದಾರನನ್ನು ಒಲಿಸಿಕೊಳ್ಳುವತ್ತ ಕೆಲಸ ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಏನೇನಿತ್ತು ಗ್ಯಾರಂಟಿ?
1. ಪ್ರತಿ ತಿಂಗಳು ಅತ್ತೆಗೆ 4,000 ರೂ. ? ಸೊಸೆಗೆ 2,500 ರೂ.
2. ಪ್ರತಿ ಹೆಣ್ಣುಮಗುವಿನ ಖಾತೆಗೆ ಪ್ರತಿ ತಿಂಗಳು 2,500 ರೂ. (ಮಹಾಲಕ್ಷ್ಮಿ ಯೋಜನೆ)
3. ಪಿಂಚಣಿ ಮೊತ್ತ 2,000 ರೂ.ನಿಂದ 4,000 ರೂ.ಗೆ ಹೆಚ್ಚಳ
4. 500 ರೂಪಾಯಿಗೆ ಒಂದು ಗ್ಯಾಸ್ ಸಿಲಿಂಡರ್
5. ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ನೆರವು
6. ಬಡವರಿಗೆ 200 ಯೂನಿಟ್‌ವರೆಗೂ ಉಚಿತ ವಿದ್ಯುತ್