ಹೊಸದಿಗಂತ ಡಿಜಿಟಲ್ ಡೆಸ್ಕ್:
ನಾಲ್ಕು ರಾಜ್ಯಗಳ ಚುನಾವಣಾ ಫಲಿತಾಂಶ ಇಂದು ಹೊರಬೀಳಲಿದ್ದು, ರಾಜಸ್ಥಾನದಲ್ಲಿ ಬಿಜೆಪಿ ಆರಂಭಿಕ ಮುನ್ನಡೆ ಸಾಧಿಸಿದೆ.
ಕಾಂಗ್ರೆಸ್ ಕೂಡ ಖಡಕ್ ಫೈಟ್ ನೀಡುತ್ತಿದೆ. ಬಹುತೇಕ ಚುನಾವಣೋತ್ತರ ಸಮೀಕ್ಷೆಗಳ ಅನ್ವಯ ಈ ಬಾರಿ ಬಿಜೆಪಿ ಗೆದ್ದು ಗದ್ದುಗೆ ಏರಲಿದೆ.
ರಾಜಸ್ಥಾನದ 199 ಕ್ಷೇತ್ರಗಳ ಮತಎಣಿಕೆ ನಡೆಯುತ್ತಿದ್ದು, ಬಹುಮತಕ್ಕೆ 100 ಸ್ಥಾನ ಅಗತ್ಯವಿದೆ. ಬೆಳಗ್ಗೆ 9ಕ್ಕೆ ಬಿಜೆಪಿ 60, ಕಾಂಗ್ರೆಸ್ 50 ಹಾಗೂ ಇತರರು 10 ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ.