ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಷ್ಯಾದಲ್ಲೇ ಅತಿ ದೊಡ್ಡ ತರಕಾರಿ ಸಗಟು ಮಾರುಕಟ್ಟೆ ಎಂಬ ಹೆಗ್ಗಳಿಕೆ ಪಡೆದಿರುವ ದೆಹಲಿಯ ಆಜಾದ್‌ಪುರ ತರಕಾರಿ ಮಾರುಕಟ್ಟೆಯಲ್ಲಿ ಬೆಳ್ಳಂಬೆಳಗ್ಗೆ ನಸುಕಿನ 4 ಗಂಟೆಗೆ ಕಾಣಿಸಿಕೊಂಡ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಎಲ್ಲರಿಗೂ ಅಚ್ಚರಿ ಮೂಡಿಸಿದರು.
ರಾಹುಲ್ ಭೇಟಿಯ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಮಾರುಕಟ್ಟೆಯ ತರಕಾರಿ, ಹಣ್ಣು ಮಾರಾಟಗಾರರು ಹಾಗೂ ಸ್ಥಳೀಯರೊಂದಿಗೆ ಸಂವಾದ ನಡೆಸಿದ ರಾಹುಲ್, ತರಕಾರಿ ಬೆಲೆಗಳ ಬಗ್ಗೆ ಮಾಹಿತಿ ಪಡೆದರು.
ಇತ್ತೀಚೆಗಷ್ಟೇ ದೆಹಲಿಯಿಂದ ಶಿಮ್ಲಾಕ್ಕೆ ತೆರಳುತ್ತಿದ್ದ ವೇಳೆ ಹರಿಯಾಣದ ಸೋನಿಪತ್ ತಾಲ್ಲೂಕಿನ ಮದೀನಾ ಎಂಬಲ್ಲಿನ ಭತ್ತದ ಗದ್ದೆಯಲ್ಲಿ ಟ್ರ್ಯಾಕ್ಟರ್ ಓಡಿಸಿ ರಾಹುಲ್ ಸುದ್ದಿ ಮಾಡಿದ್ದರು. ಅದರ ಬೆನ್ನಿಗೇ ಬತ್ತದ ಗದ್ದೆಗಳಲ್ಲಿ ನಾಟಿ ಮಾಡಿದ್ದ ಅವರ ಫೋಟೋಗಳನ್ನು ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು.