ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೆರಿಕದ ಅಧ್ಯಕ್ಷ ಜೋ ಬಿಡನ್ ಕುರಿತ ವಿಚಾರಗಳು ಆಗಾಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಇದೀಗ ಅವರ 80ರ ಹರೆಯದಲ್ಲೂ ಶರ್ಟ್‌ಲೆಸ್ ಫೋಟೋಗಳಿಗೆ ಪೋಸ್ ಕೊಟ್ಟಿರುವ ಚಿತ್ರಗಳು ಹರಿದಾಡುತ್ತಿವೆ. ಬಿಡೆನ್ ಹಾಲಿವುಡ್ ಆಕ್ಷನ್ ಹೀರೋನಂತೆ ಬೇಸ್‌ಬಾಲ್ ಕ್ಯಾಪ್ ಮತ್ತು ಕನ್ನಡಕವನ್ನು ಧರಿಸಿರುವ ಫೋಟೋಗಳು ನೆಟ್ಟಿಗರ ಮನ ಗೆದ್ದಿವೆ.
ಬಿಡೆನ್ ಡೆಲವೇರ್ ಹೋಮ್ ಬಳಿಯ ರೆಹೋಬೋತ್ ಬೀಚ್‌ನಲ್ಲಿ ಸ್ವಲ್ಪ ಕಾಲ ಎಂಜಾಯ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅವರು ಕ್ಯಾಪ್,ಕೂಲಿಂಗ್ ಗ್ಲಾಸ್ ಧರಿಸಿ ಪೋಸ್ ಕೊಟ್ಟಿರುವುದನ್ನು ಅಲ್ಲಿದ್ದ ಪತ್ರಕರ್ತರೊಬ್ಬರು ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ.
ರಷ್ಯಾ ಅಧ್ಯಕ್ಷ ಪುಟಿನ್ ಅವರ ಇಂತಹ ಹಲವು ಫೋಟೋಗಳು ಈ ಮುಂಚೆ ವೈರಲ್ ಆಗಿದ್ದವು. ಪುಟಿನ್ ಶರ್ಟ್ ಇಲ್ಲದೆ, ಮಾಂಸಖಂಡದ ದೇಹದೊಂದಿಗೆ ಕುದುರೆ ಸವಾರಿ ಮಾಡುತ್ತಿರುವ ಫೋಟೋ ಸಖತ್ ಸುದ್ದಿಯಾಗಿತ್ತು. ಅವರಂತೆಯೇ ಅಮೆರಿಕ ಅಧ್ಯಕ್ಷರ ಫೋಟೋಗಳಿವೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ.