ಚಾಕೋಲೇಟ್‌ ಫ್ಯಾಕ್ಟರಿ ವಿಡಿಯೋ ಹಂಚಿಕೊಂಡ ರಾಹುಲ್‌ ಗಾಂಧಿ: ಮಹಿಳೆಯರ ಸಾಧನೆಗೆ ಹ್ಯಾಟ್ಸಾಫ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಕಾಂಗ್ರೆಸ್ ಪಕ್ಷದ ನಾಯಕ, ಸಂಸದ ರಾಹುಲ್ ಗಾಂಧಿ ತಮಿಳುನಾಡು ರಾಜ್ಯದ ನೀಲಗಿರಿಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಊಟಿಯಲ್ಲಿರುವ ಚಾಕೊಲೇಟ್ ಕಾರ್ಖಾನೆಗೆ ರಾಹುಲ್ ಭೇಟಿ ಕೊಟ್ಟು ಅದರ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಮೋಡಿಸ್ ಚಾಕಲೇಟ್ ಕಥೆಯನ್ನು ವಿವರಿಸಿದರು. 70 ಮಹಿಳೆಯರ ತಂಡದೊಂದಿಗೆ ಊಟಿಯಲ್ಲಿ ಪ್ರಸಿದ್ಧ ಚಾಕೊಲೇಟ್ ಕಾರ್ಖಾನೆ ನಡೆಯುತ್ತಿದ್ದು, ಮಹಿಳೆಯರ ಸಾಧನೆಗೆ ಹ್ಯಾಟ್ಸಾಫ್‌ ಎಂದರು. ಈ ಚಾಕೊಲೇಟ್ ಕಥೆಯು ಭಾರತದ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ ದೊಡ್ಡ ಸಾಮರ್ಥ್ಯಕ್ಕೆ ಉತ್ತಮ ಸಾಕ್ಷಿಯಾಗಿದೆ.

ರಾಹುಲ್ ಶೇರ್ ಮಾಡಿರುವ ವಿಡಿಯೋದಲ್ಲಿ ರಾಹುಲ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುವ ಮಹಿಳೆಯರ ಜೊತೆ ಕೆಲಕಾಲ ಹರಟೆ ಹೊಡೆದರು. ಈ ವಿಡಿಯೋದಲ್ಲಿ ರಾಹುಲ್ ಮಹಿಳೆಯರೊಂದಿಗೆ ಚಾಕೊಲೇಟ್ ತಯಾರಿಕೆಯಲ್ಲಿ ತೊಡಗಿರುವುದನ್ನು ನೋಡಬಹುದು. ಬಳಿಕ ರಾಹುಲ್ ಬಾಲಕಿಯಿಂದ ಆಟೋಗ್ರಾಫ್ ತೆಗೆದುಕೊಂಡರು.

ಈ ಸಂದರ್ಭದಲ್ಲಿ ಊಟಿ ಸಮೀಪದ ಮುತ್ತನಾಡು ಗ್ರಾಮದಲ್ಲಿ ತೋಡಾ ಬುಡಕಟ್ಟು ಸಮುದಾಯದ ಜನರನ್ನು ಭೇಟಿ ಮಾಡಿದರು. ರಾಹುಲ್ ಬುಡಕಟ್ಟು ಜನಾಂಗದವರ ಜೊತೆ ಡ್ಯಾನ್ಸ್ ಮಾಡಿ, ಈ ಪ್ರವಾಸದ ವೇಳೆ ರಾಹುಲ್ ಚಾಕೊಲೇಟ್ ಫ್ಯಾಕ್ಟರಿಗೂ ಭೇಟಿ ನೀಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!