Sunday, December 10, 2023

Latest Posts

ಕಾಂಗ್ರೆಸ್​ ನಾಯಕ ಸಚಿನ್​ ಪೈಲಟ್-ಸಾರಾ ಅಬ್ದುಲ್ಲಾ ವಿಚ್ಛೇದನ: ಚುನಾವಣಾ ಅಫಿಡವಿಟ್‌ನಲ್ಲಿ ಬಹಿರಂಗ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಾಜಸ್ಥಾನ ಕಾಂಗ್ರೆಸ್​ ನಾಯಕ ಸಚಿನ್​ ಪೈಲಟ್​ ಹಾಗೂ ಅವರ ಪತ್ನಿ ಸಾರಾ ಅಬ್ದುಲ್ಲಾ ತಮ್ಮ ದಾಂಪತ್ಯ ಜೀವನ ಮುರಿದುಕೊಂಡಿದ್ದಾರೆ ಎಂದು ಮಾಹಿತಿ ಬಹಿರಂಗಗೊಂಡಿದೆ.

ಪ್ರಸ್ತುತ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಟೋಂಕ್​ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿರುವ ಸಚಿನ್ ಪೈಲಟ್​ ತಮ್ಮ ಅಫಿಡವಿಟ್‌ನಲ್ಲಿ ಈ ವಿಷಯ ಉಲ್ಲೇಖಿಸಿದ್ದಾರೆ.

ನ್ಯಾಷನಲ್​ ಕಾನ್ಫರೆನ್ಸ್ ನಾಯಕ, ಜಮ್ಮು-ಕಾಶ್ಮೀರದ ಮಾಜಿ ಸಿಎಂ ಫಾರೂಕ್ ಅಬ್ದುಲ್ಲಾ ಅವರ ಮಗಳು ಮತ್ತು ಒಮರ್ ಅಬ್ದುಲ್ಲಾ ಅವರ ಸಹೋದರಿ ಸಾರಾ ಅವರನ್ನು 2004ರಲ್ಲಿ ಸಚಿನ್​ ಪೈಲಟ್​ ವಿವಾಹವಾಗಿದ್ದರು.
ಈ ದಂಪತಿಗೆ ಅರಾನ್ ಪೈಲಟ್ ಮತ್ತು ವಿಹಾನ್ ಪೈಲಟ್ ಎಂಬಿಬ್ಬರು ಮಕ್ಕಳಿದ್ದಾರೆ.

ಈ ಹಿಂದೆ ಸಚಿನ್ ಪೈಲಟ್​ ಹಾಗೂ ಸಾರಾ ನಡುವಿನ ದಾಂಪತ್ಯದ ಬಿರುಕಿನ ಬಗ್ಗೆ ಹಲವು ಬಾರಿ ವರದಿಗಳು ಪ್ರಕಟಗೊಂಡಿದ್ದವು. ಆದರೆ, ಸಚಿನ್ ಪೈಲಟ್​ ತಿರಸ್ಕರಿಸಿದ್ದರು.

2018ರ ಚುನಾವಣಾ ಅಫಿಡವಿಟ್‌ನಲ್ಲಿ ಸಾರಾ ಪೈಲಟ್​ ಅವರನ್ನು ತಮ್ಮ ಪತ್ನಿ ಎಂದು ಸಚಿನ್​ ಪೈಲಟ್ ಉಲ್ಲೇಖಿಸಿದ್ದರು. ಈ ಬಾರಿ ಪತಿಯ ಸ್ಥಳದಲ್ಲಿ ವಿಚ್ಛೇದನ ಎಂದು ತಿಳಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!