ಹೊಸದಿಗಂತ ವರದಿ ಬಾಗಲಕೋಟೆ:
ರಾಜ್ಯ ಕಾಂಗ್ರೆಸ್ ಪಕ್ಷದ ನಾಯಕರು ಅಧಿಕಾರಕ್ಕಾಗಿ ರಣಹದ್ದುಗಳಂತೆ ವರ್ತಿಸುತ್ತಿದ್ದಾರೆ ಎಂದು ಮಾಜಿ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಆರೋಪಿಸಿದರು.
ನವನಗರದ ಪತ್ರಿಕಾ ಭವನದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಸರ್ಕಾರವನ್ನು ಕೆಡವಲು ನಾವು ಪಾಪದ ಕೆಲಸ ಮಾಡುವುದಿಲ್ಲ. ಅವರ ಪಕ್ಷದಲ್ಲೇ ಅಧಿಕಾರಕ್ಕಾಗಿ ಹಾಗೂ ಸಿಎಂ ಖುರ್ಚಿಗಾಗಿ ನಾಲ್ಕು ಗುಂಪುಗಳಾಗಿವೆ ಎಂದು ದೂರಿದರು.
ನಮ್ಮಸರ್ಕಾರವಿದ್ದಾಗ ಲಿಂಗಾಯತ ನಾಯಕರನ್ನು ಕಡೆಗಣಿಸಲಾಗುತ್ತಿದೆ ಎನ್ನುತ್ತಿದ್ದ ಕಾಂಗ್ರೆಸ್ ನಾಯಕರು ಈಗ ಏನ್ ಮಾಡ್ತಿದ್ದಾರೆ. ಸಿದ್ದರಾಮಯ್ಯ ಹಾಗೂ ಪರಮೇಶ್ವರ ಅವರ ಭೋಜನಕೂಟಕ್ಕೆ ಲಿಂಗಾಯತ ಮಂತ್ರಿ ಹಾಗೂ ಶಾಸಕರನ್ನು ಆಹ್ವಾನಿಸಲಿಲ್ಲ. ಇವರ ಕಾಲದಲ್ಲೇ ಲಿಂಗಾಯತ ಹಾಗೂ ದಲಿತನಾಯಕರನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.
ಈ ವೇಳೆ ಬಿಜೆಪಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ ಇದ್ದರು.