Thursday, October 6, 2022

Latest Posts

 ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ ಬಸಾಪುರದ ಮುಖಂಡರು!

ಹೊಸ ದಿಗಂತ ವರದಿ , ಹಾವೇರಿ:

ಹಾವೇರಿ ತಾಲೂಕಿನ ಬಸಾಪುರ ಗ್ರಾಮದ ಮುಖಂಡರುಗಳಾದ ತಿರುಕಪ್ಪ ಹುಲ್ಮನಿ, ನೀಲಪ್ಪ ಕಂಬಳಿ ಮತ್ತು ಪುಟ್ಟಪ್ಪ ದಂಡಿನ ಮುಂತಾದವರು ಕಾಂಗ್ರೆಸ್ ಪಕ್ಷ ಬಿಟ್ಟು ಶಾಶಕ ನೆಹರು ಓಲೇಕಾರ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾದರು
ಹಾವೇರಿ ನಗರದ ಭಾರತಿಯ ಜನತಾ ಪಕ್ಷದ ಜಿಲ್ಲಾ ಕಾರ್ಯಾಲಯದಲ್ಲಿ ಆಯೋಜಿಸಿದ್ದ ಸರಳ ಕಾರ್ಯಕ್ರಮದಲ್ಲಿ ಶಾಸಕ ನೆಹರು ಓಲೇಕಾರ ಅವರು ಬಿಜೆಪಿಯ ಶಾಲು ಹೊದಿಸಿ ಅವರನ್ನು ಪಕ್ಷಕ್ಕೆ ಬರಮಾಡಿಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಹುಲ್ಮನಿ, ಬಿಜೆಪಿಯ ಸಿದ್ಧಾಂತಗಳನ್ನು ಮೆಚ್ಚಿ ಹಾಗೂ ಬಿಜೆಪಿ ಸರಕಾರದ ಅಭಿವೃದ್ಧಿ ಕೆಲಸಗಳನ್ನು ನೋಡಿ ಪಕ್ಷಕ್ಕೆ ಸೇರ್ಪಡೆ ಆಗುತ್ತಿರುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಸಿ.ಕೋರಿ, ಓ.ಬಿ.ಸಿ ಮೋರ್ಚಾ ಜಿಲ್ಲಾಧ್ಯಕ್ಷ ನೀಲಪ್ಪ ಚಾವಡಿ, ತಾ.ಪಂ ಮಾಜಿ ಸದಸ್ಯ ಮಾಂತೇಶ ಬನ್ನಿಮಟ್ಟಿ, ಶಂಕರಗೌಡ ಹಟ್ಟಿ, ಜಯಶೀಲಾ.ಕೆ.ಆರ್., ಶ್ರೀಕಾಂತ ಪೂಜಾರ, ಪುಷ್ಪಲತಾ ಚಕ್ರಸಾಲಿ, ಮಂಜುಳಾ ಪವಾರ, ಅಲ್ತಾಫ್, ಮಾಂತೇಶ ದೊಡ್ಡಮನಿ, ಸೋಮಣ್ಣ ಕಳ್ಳಿಹಾಳ ಸೇರಿದಮತೆ ಇತರರಿದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!