ಹೊಸದಿಗಂತ ವರದಿ ಹುಬ್ಬಳ್ಳಿ:
ಪಕ್ಷ ತನ್ನ ಪ್ರಣಾಳಿಕೆಯಲ್ಲಿ ಸಂವಿಧಾನ ವಿರೋಧಿ ನೀತಿ ಅನುಸರಿಸುವ ವ್ಯಕ್ತಿ ಹಾಗೂ ಸಂಘಟನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಮಾತ್ರ ಹೇಳಿದೆ. ಆದರೆ ಬಿಜೆಪಿ ಅವರು ಬಜರಂಗದಳ ಬ್ಯಾನ್ ಮಾಡುತ್ತಾರೆ ಎಂದು ತಿರುಚುತ್ತಿದ್ದಾರೆ ಎಂದು ಕಾಂಗ್ರೆಸ್ ಪ್ರಣಾಳಿಕೆ ಸಮಿತಿ ಉಪಾಧ್ಯಕ್ಷ ರಾಧಾ ಕೃಷ್ಣನ್ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹನುಮಂತನನ್ನು ಬಂಧನ ಮಾಡಲು ಹೊರಟ್ಟಿದ್ದಾರೆ ಎಂದು ಪ್ರಧಾನಿ ಮೋದಿಯವರು ಹೇಳುತ್ತಿದ್ದಾರೆ. ಇದೆ ಬಿಜೆಪಿ ಸರ್ಕಾರವಿದ್ದಾಗ ಬಜರಂಗದಳದ ಅಧ್ಯಕ್ಷ ಬಂಧಿಸಿದ್ದರು ಎಂದು ಆರೋಪಿಸಿದರು.
ಪ್ರಣಾಳಿಕೆಯಲ್ಲಿ ಶಿಕ್ಷಣ, ಆರೋಗ್ಯ, ಕೈಗಾರಿಕೆ, ಕೃಷಿ, ನೀರಾವರಿ, ಪ್ರಾಂತೀಯ ಶಿಕ್ಷಣ ನೀತಿ ಜಾರಿಗೆ, ನೀರಾವರಿ ಯೋಜನೆಗಳು, ಅತೀ ಹೆಚ್ಚು ವಿದ್ಯುತ್ ಉತ್ಪಾದನೆ, ಹೈನುಗಾರಿಕೆ ಜಾಸ್ತಿಗೊಳಿಸುವುದು, ಎನ್.ಇ.ಪಿ ಯೋಜನೆ ಜಾರಿ, ಕಲ್ಯಾಣ ಹಾಗೂ ಕಿತ್ತೂರ ಕರ್ನಾಟಕ ವಿಶೇಷ ಆದ್ಯತೆ ನೀಡಲಾಗುವುದು ಎಂದು ಹೇಳಿದರು.
ಮಾಜಿ ಸಭಾಪತಿ ಎ.ಆರ್. ಸುದರ್ಶನ್ ಮಾತನಾಡಿ, ರಾಜ್ಯದ ಹಿತದೃಷ್ಟಿಗಾಗಿ ಬದಲಾವಣೆ ತರುವ ಅವಕಾಶ ಈ ಚುನಾವಣೆಯ ಮೂಲಕ ಸಿಕ್ಕಿದೆ. ಜನ ವಿರೋಧಿ ಸರ್ಕಾರ ತೆಗೆಯಲು ಜನ ನಿರ್ಧಾರಿಸಿದ್ದಾರೆ. ನಮ್ಮ ಸರ್ಕಾರವಿದ್ದಾಗ 158 ಆಶ್ವಾಸನೆ ಈಡೇರಿಸಿದ್ದೇವೆ. ಆದರೆ ಬಿಜೆಪಿ ಜನರ ಭಾವನೆಗಳ ಮುಂದಿಟ್ಟುಕೊಂಡು ಮತ ಕೇಳುತ್ತಿದ್ದಾರೆ. ಬಿಜೆಪಿ ಜನರ ಸುಧಾರಣೆ ಏನು ಮಾಡಿಲ್ಲ ಎಂದರು.
ಬಿಜೆಪಿ ರಾಜ್ಯದಲ್ಲಿ ಕೇವಲ ಕೋಮು ಗಲಭೆ ಸೃಷ್ಟಿಸುವ ಕಾರ್ಯ ಮಾಡಿದೆ. ಅದನ್ನು ತಡೆಯುವ ಉದ್ದೇಶದಿಂದ ಸೂಕ್ತ ಕಾನೂನು ಕ್ರಮ ತರಲು ಕಾಂಗ್ರೆಸ್ ನಿರ್ಧರಿಸಿದೆ ಎಂದು ಹೇಳಿದರು.