VIRAL | ಕೊಲೀಗ್ಸ್ ಜೊತೆ ಸ್ನೇಹ ಬೇಡ, ಕೆಲಸ ಮುಗಿದ ಮೇಲೆ ಪಾರ್ಟಿ ಬೇಡ! ಬಾಸ್ ಮೆಮೋ ಎಲ್ಲೆಡೆ ವೈರಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಕೆಲವೊಂದು ಕಂಪನಿಗಳಲ್ಲಿ ಕೊಲೀಗ್ಸ್ ಮಧ್ಯೆ ಸ್ನೇಹ ಇರಲಿ, ಗುಂಪಾಗಿ ಕೆಲಸ ಮಾಡಿದರೆ ಕೆಲಸದ ಕ್ವಾಲಿಟಿ ಇನ್ನಷ್ಟು ಹೆಚ್ಚುತ್ತದೆ ಎಂದು ನಂಬುವವರಿದ್ದಾರೆ. ಆದರೆ ಇನ್ನ ಕೆಲವು ಕಂಪನಿಗಳಲ್ಲಿ ಕೊಲೀಗ್ಸ್ ಸ್ನೇಹಿತರಾದ್ರೆ ಕೆಲಸ ಕಮ್ಮಿ ಹರಟೆ ಜಾಸ್ತಿಯಾಗುತ್ತದೆ ಎಂದು ನಂಬುವ ಬಾಸ್‌ಗಳೂ ಇದ್ದಾರೆ.

ಇದೇ ರೀತಿ ಬಾಸ್ ಒಬ್ಬರು ಕಳಿಸಿರುವ ಮೆಮೋವೊಂದು ಸದ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಲಸ ಫನ್ ಅಂತ ಯಾರೂ ಹೇಳಿಲ್ಲ, ಇದು ನಿಮ್ಮ ಕೆಲಸ. ಕೆಲಸದ ಟೈಮ್‌ನಲ್ಲಿ ಕೆಲಸದ ವಿಷಯ ಬಿಟ್ಟು ಬೇರೆ ಮಾತನಾಡೋಹಾಗಿಲ್ಲ. ಕೊಲೀಗ್ಸ್ ಜೊತೆ ಕೆಲಸದ ಸಮಯದಲ್ಲಿ ಯಾವ ಸ್ನೇಹವೂ ಬೇಕಿಲ್ಲ.

Toxic Work Culture: ಕೆಲಸದ ಸ್ಥಳದಲ್ಲಿ ಸ್ನೇಹ ಬೇಡ; ಬಾಸ್ ಕಳಿಸಿದ ಮೆಮೊ ಎಲ್ಲೆಡೆ ವೈರಲ್! ಫೋನ್ ನಂಬರ್ ಎಕ್ಸ್‌ಚೇಂಜ್ ಮಾಡೋದು, ಕೆಲಸ ಮುಗಿದ ಮೇಲೆ ಮೀಟ್ ಮಾಡೋದು, ಪಾರ್ಟಿ ಮಾಡೋದು ಅವಶ್ಯಕತೆ ಇಲ್ಲ. ಈ ರೀತಿ ನಮ್ಮ ಆಫೀಸ್‌ನಲ್ಲಿ ಯಾರಾದ್ರೂ ಮಾಡಿದ್ರೆ ನಮ್ಮ ಗಮನಕ್ಕೆ ತನ್ನಿ ಎನ್ನುವ ಮೆಮೊವೊಂದನ್ನು ಕಳುಹಿಸಲಾಗಿದೆ. ಈ ಪೋಸ್ಟ್ ಎಲ್ಲೆಡೆ ವೈರಲ್ ಆಗಿದ್ದು, ಕೆಲವರು ಇದರಲ್ಲೇನು ತಪ್ಪಿಲ್ಲ ಎಂದಿದ್ದಾರೆ. ಆದರೆ ಹಲವರು ಈ ರೀತಿ ಕೆಲಸ ಮಾಡಿದ್ರೆ ಮೆಂಟಲಿ ಪ್ರೆಶರ್ ಆಗಿ ಕೆಲಸದ ಕ್ವಾಲಿಟಿ ಕಡಿಮೆಯಾಗುತ್ತದೆ ಎಂದು ಹೇಳಿದ್ದಾರೆ.

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!