ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪಕ್ಷ ಸಂಘಟನೆ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದುಹೇಳಿದ್ದಾರೆ.
ನಮ್ಮ ಗುರಿ ಹಳೆ ಮೈಸೂರು ಭಾಗದಲ್ಲಿ ಪಕ್ಷ ಸಂಘಟಿಸುವುದಾಗಿದೆ. ನಾವು ಸಿ.ಪಿ. ಯೋಗೇಶ್ವರ್ ಮೇಲೆ ಅವಲಂಬಿತರಾಗಿರಲಿಲ್ಲ. ಕಾರ್ಯಕರ್ತರ ಪಡೆ ನಮಗೆ ಅಲ್ಲಿದೆ. ಪಕ್ಷವನ್ನು ಗಟ್ಟಿಗೊಳಿಸುತ್ತೇವೆ. ಯೋಗೇಶ್ವರ್ ಸಾಕಷ್ಟು ವಿಚಾರ ಹೇಳಬಹುದು, ಹೇಳಲಿ. ಎಲ್ಲವನ್ನು ಕಾಲವೇ ತೀರ್ಮಾನಿಸುತ್ತದೆ ಎಂದು ವಿಜಯೇಂದ್ರ ಹೇಳಿದ್ದಾರೆ.