ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರೀ ಮಳೆಗೆ ಬೆಂಗಳೂರಿನ ಕೆಂಗೇರಿ ಕೆರೆಯಲ್ಲಿ ಮುಳುಗಿ ಮೃತಪಟ್ಟ ಅಣ್ಣ, ತಂಗಿ ಕುಟುಂಬಕ್ಕೆ ಸರ್ಕಾರ 5 ಲಕ್ಷ ಪರಿಹಾರ ಘೋಷಣೆ ಮಾಡಿದೆ.
ಈ ಕುರಿತು ಡಿಸಿಎಂ ಡಿಕೆ ಶಿವಕುಮಾರ್ ಘೋಷಣೆ ಮಾಡಿದ್ದು, ಆಟವಾಡುವಾಗ ಕೆರೆಗೆ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿತ್ತು. ವರ್ಷಾ ಲೇಔಟ್ ನ ಜಯಮ್ಮ ಎಂಬುವರ ಮಕ್ಕಳಾದ ಜಾನ್ಸನ್(13), ಮಹಾಲಕ್ಷ್ಮಿ(11) ಕೆರೆಗೆ ಬಿದ್ದು ಮೃತಪಟ್ಟ ಅಣ್ಣ, ತಂಗಿಯಾಗಿದ್ದಾರೆ.
ಕಳೆದ ಸೋಮವಾರ ಸಂಜೆ 5:30ಕ್ಕೆ ಕೆಂಗೇರಿ ಬಸ್ ನಿಲ್ದಾಣ ಎದುರಿನ ಕೆರೆಯಲ್ಲಿ ಘಟನೆ ನಡೆದಿತ್ತು.