ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಶಿ ತರೂರ್ ತವರು ರಾಜ್ಯವಾದ ಕೇರಳ ಪ್ರವಾಸಕ್ಕೆಕಾಂಗ್ರೆಸ್ನಲ್ಲೇ ಟೀಕೆಗಳು ಕೇಳಿಬರುತ್ತಿದ್ದು, ಇದನ್ನೆಯಾವುದನ್ನು ಲೆಕ್ಕಿಸದೆ ಬಹಿರಂಗವಾಗಿ ಮಾತನಾಡುತ್ತಿದ್ದಾರೆ.
ನಾನು ಯಾರಿಗೂ ಹೆದರುವುದಿಲ್ಲ, ನನ್ನ ಬಗ್ಗೆ ಯಾರೂ ಭಯಪಡುವ ಅಗತ್ಯವಿಲ್ಲ ಎಂದು ಹೇಳಿದರು.
ಕೇರಳ ಕಾಂಗ್ರೆಸ್ ನಲ್ಲಿ ಶಶಿ ತರೂರ್ ಅವರ ಬೆಂಬಲಿಗರು ಹೆಚ್ಚಾಗುತ್ತಿದ್ದು, ತರೂರ್ ಗುಂಪು ಎಂದೇ ಗುರುತಿಸಿಕೊಂಡಿರುವುದು ರಾಜ್ಯಮಟ್ಟದ ನಾಯಕತ್ವದಲ್ಲಿ ಆತಂಕಕಾರಿ ಬೆಳವಣಿಗೆಯಾಗಿದೆ ಎಂಬ ವಿಶ್ಲೇಷಣೆಗಳ ನಡುವೆ ಶಶಿ ತರೂರ್ ನಡೆ ಮಹತ್ವ ಪಡೆದುಕೊಂಡಿದೆ.
ಶಶಿ ತರೂರ್ ಮಲಬಾರ್ ಪ್ರವಾಸದಲ್ಲಿದ್ದು, ಯುಡಿಎಫ್- ಮಿತ್ರ ಪಕ್ಷ ಐಯುಎಂಎಲ್ ನಾಯಕರನ್ನು ಭೇಟಿ ಮಾಡಿದ್ದು, ಇದೊಂದು ಸೌಹಾರ್ದಯುತ ಭೇಟಿಯಷ್ಟೇ ಎಂದು ಹೇಳಿದ್ದಾರೆ.
ತಮಗೆ ಪಕ್ಷದ ಒಳಗೇ ಗುಂಪನ್ನು ಕಟ್ಟುವ ಉದ್ದೇಶ, ಆಸಕ್ತಿ ಇಲ್ಲ ಎಂದು ಶಶಿ ತರೂರ್ ಸ್ಪಷ್ಟನೆ ನೀಡಿದ್ದಾರೆ. ಮಲಬಾರ್ ಪ್ರವಾಸ ಕೈಗೊಂಡಿರುವ ಶಶಿ ತರೂರ್ ಗೆ ಕೇರಳದ ವಿಪಕ್ಷ ನಾಯಕ ವಿ.ಡಿ ಸತೀಶನ್ ಎಚ್ಚರಿಕೆ ನೀಡಿದ್ದು, ಈ ರೀತಿಯ ಪ್ರತ್ಯೇಕ ಚಟುವಟಿಕೆಗಳಿಗೆ ಪಕ್ಷದಲ್ಲಿ ಜಾಗವಿಲ್ಲ, ಇಂತಹ ಯಾವುದೇ ನಡೆಗಳನ್ನೂ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಹೇಳಿದ್ದಾರೆ.