Thursday, December 8, 2022

Latest Posts

ನಿಲ್ಲದ ‘ಕಾಂತಾರ’ದ ಓಟ: 400 ಕೋಟಿ ರೂ.ಕಲೆಕ್ಷನ್ ಮಾಡಿದ ಕನ್ನಡದ ಸಿನಿಮಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

‘ಕಾಂತಾರ’ ಸಿನಿಮಾ ಅನೇಕ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಕನ್ನಡ ಮಾತ್ರವಲ್ಲದೇ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿಯೂ ಅಬ್ಬರಿಸಿಸುತ್ತಿದೆ.

ಈಗಾಗಲೇ ೫೦ ದಿನ ಕಳೆದಿರುವ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಖತ್ ಆಗಿ ಬಾಚುತ್ತಿದ್ದು, ಬರೋಬ್ಬರಿ 400 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ.

ಕನ್ನಡದಲ್ಲಿ 168.50 ಕೋಟಿ ರೂಪಾಯಿ ಸಂಗ್ರಹ ಆಗಿದೆ. ಆಂಧ್ರ ಮತ್ತು ತೆಲಂಗಾಣದಲ್ಲಿ ತೆಲುಗು ವರ್ಷನ್​ನಿಂದ 60 ಕೋಟಿ ರೂಪಾಯಿ ಹರಿದುಬಂದಿದೆ. ತಮಿಳುನಾಡಿಲ್ಲಿ 12.70 ಕೋಟಿ ರೂಪಾಯಿ ಹಾಗೂ ಕೇರಳದಲ್ಲಿ 19.20 ಕೋಟಿ ರೂಪಾಯಿ ಕಲೆಕ್ಷನ್​ ಆಗಿದೆ. ಇನ್ನು, ಉತ್ತರ ಭಾರತದಲ್ಲೂ ಸಿನಿಮಾ ಕಮಾಲ್ ಮಾಡಿದ್ದೂ, ಹಿಂದಿ ವರ್ಷನ್​ನಿಂದ ಬರೋಬ್ಬರಿ 96 ಕೋಟಿ ರೂಪಾಯಿ ಆದಾಯ ಬಂದಿದೆ. ವಿದೇಶದ ಬಾಕ್ಸ್​ ಆಫೀಸ್​ನಲ್ಲಿ 44.50 ಕೋಟಿ ರೂಪಾಯಿ ಬಾಚಿಕೊಂಡಿದೆ. ಕನ್ನಡದ ಸಿನಿಮಾ ಸಾಧನೆ ನಿಜಕ್ಕೂ ಶ್ಲಾಘನೀಯ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!