ಕಾಂಗ್ರೆಸ್ ಪಕ್ಷ ಗಿರವಿ ಅಂಗಡಿ ಇದ್ದಂತೆ, ಅಲ್ಲಿ ಬಡವರಿಗೆ ಉಳಿಗಾಲವಿಲ್ಲ: ಛಲವಾದಿ ಟೀಕೆ

ಹೊಸದಿಗಂತ ಚಿತ್ರದುರ್ಗ:
ಹೈಕೋರ್ಟ್‌ನ ಹಿರಿಯ ವಕೀಲ ವೈ.ಆರ್.ಸದಾಶಿವರೆಡ್ಡಿರವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವವರ ವಿರುದ್ದ ಕಾನೂನು ರೀತಿಯ ಕ್ರಮ ಜರುಗಿಸಿ ವಕೀಲರುಗಳಿಗೆ ರಕ್ಷಣೆ ನೀಡುವಂತೆ ವಕೀಲರ ಸಂಘದಿಂದ ಸೋಮವಾರ ಪ್ರತಿಭಟನೆ ನಡೆಸಿದರು. ತೋಳಿಗೆ ಕೆಂಪುಪಟ್ಟಿ ಧರಿಸಿ ನ್ಯಾಯಾಲಯದ ಆವರಣದಿಂದ ಮೆರವಣಿಗೆ ನಡೆಸಿದ ವಕೀಲರುಗಳು ಆರೋಪಿಗಳ ವಿರುದ್ದ ಘೋಷಣೆಗಳನ್ನು ಕೂಗಿದರು. ಬಳಿಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಅಪರ ಜಿಲ್ಲಾಧಿಕಾರಿ ಮೂಲಕ ರಾಜ್ಯದ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.
ಭಾರತೀಯ ವಕೀಲರ ಪರಿಷತ್ತಿನ ಉಪಾಧ್ಯಕ್ಷ, ಕರ್ನಾಟಕ ವಕೀಲರ ಪರಿಷತ್ತಿನ ಸದಸ್ಯರಾಗಿರುವ ನ್ಯಾಯವಾದಿ ವೈ.ಆರ್.ಸದಾಶಿವರೆಡ್ಡಿರವರ ಕಚೇರಿಗೆ ಕಳೆದ ೧೪ ರಂದು ನುಗ್ಗಿದ ದುಷ್ಕರ್ಮಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ವಕೀಲರುಗಳ ರಕ್ಷಣೆಗಾಗಿಯೇ ಕಾಯ್ದೆ ಜಾರಿಯಾಗಿದ್ದರೂ ವಕೀಲರುಗಳ ಮೇಲೆ ನಡೆಯುತ್ತಿರುವ ಹಲ್ಲೆಗಳು ಇನ್ನು ನಿಂತಿಲ್ಲ. ಇದರಿಂದ ವಕೀಲರುಗಳ ಸಮುದಾಯದಲ್ಲಿ ಭಯ ಮೂಡಿಸಿದೆ. ವಕೀಲರ ಸಂರಕ್ಷಣಾ ಕಾಯಿದೆಯನ್ನು ಇನ್ನಷ್ಟು ಬಲಪಡಿಸಿ  ವಕೀಲರುಗಳ ಮೇಲೆ ಹಲ್ಲೆಯಾಗದಂತೆ ಸರ್ಕಾರ ಕಟ್ಟೆಚ್ಚರ ವಹಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ವೈ.ತಿಪ್ಪೇಸ್ವಾಮಿ, ಉಪಾಧ್ಯಕ್ಷ ಬಿ.ಎಂ.ಅನಿಲ್‌ಕುಮಾರ್, ಪ್ರಧಾನ ಕಾರ್ಯದರ್ಶಿ ಆರ್.ಗಂಗಾಧರ್, ಖಚಾಂಚಿ ಬಿ.ಇ.ಪ್ರದೀಪ್, ಜಂಟಿ ಕಾರ್ಯದರ್ಶಿ ಗಿರೀಶ್ ಬಿ. ವಕೀಲರುಗಳಾದ ಬೀಸ್ನಳ್ಳಿ ಜಯಣ್ಣ, ರವೀಂದ್ರ, ಸುರೇಶ್, ದಾಸಪ್ಪ, ಮೊಹಮದ್ ಇಮ್ರಾನ್, ಹರೀಶ್ ಎನ್, ಬಿ.ಎ.ರಾಜೀವ್, ಆರ್.ಧನಂಜಯ, ಅಶೋಕ್‌ಬೆಳಗಟ್ಟ, ಎನ್.ಎಸ್.ವರುಣ, ಆರ್.ರವಿ, ರೂಪದೇವಿ ಬಿ.ಎನ್, ಶೀಲ ಪಿ, ನೂರುಲ್ಲಾ ಹಸನ್, ನಜೀಬುಲ್ಲಾ, ಪ್ರಕಾಶ್, ಶಿವಣ್ಣರೆಡ್ಡಿ, ತಿಪ್ಪೇಸ್ವಾಮಿ, ಸಾವಿತ್ರಿ, ಮುಬಿನಾಬೇಗಂ, ಮಂಜುಳ, ಪವಿತ್ರ, ಉಷ ಸೇರಿದಂತೆ ನೂರಾರು ವಕೀಲರುಗಳು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here