ಹೊಸದಿಗಂತ, ಕಲಬುರಗಿ:
ಕಾಂಗ್ರೆಸ್ ಪಕ್ಷ ಯಾರ ಮೇಲೂ ಅವಲಂಬಿತವಾಗಿ ನಿಂತಿಲ್ಲ. ಆಯಾ ರಾಮ ಗಯಾ ರಾಮ ಎಂದು ಬಿಟ್ಟುಬಿಡುತ್ತೇವೆ ಎಂದು ಹೇಳುವ ಮೂಲಕ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಪ್ರಿಯಾಂಕ್ ಖರ್ಗೆ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರಿಗೆ ಟಾಂಗ್ ನೀಡಿದ್ದಾರೆ.
ಗುರುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಗದೀಶ್ ಶೆಟ್ಟರ್ ಯಾವ ಸನ್ನಿವೇಶದಲ್ಲಿ ಬಿಜೆಪಿಗೆ ಸೇರಿದ್ರು ನನಗೆ ಗೊತ್ತಿಲ್ಲ. ಆದರೆ, ಅವರಿಗೆ ಬಿಜೆಪಿಯವರು ಕೈಕೊಟ್ಟಾಗ ಕಾಂಗ್ರೆಸ್ ಕೈಹಿಡಿದಿತ್ತು. ಅಷ್ಟೇ ಸಾಲದಂತೆ ವಿಧಾನ ಪರಿಷತ್ ಸದಸ್ಯ ಕೂಡ ಮಾಡಿತ್ತು ಎಂದು ಹೇಳಿದರು.
ಆರು ತಿಂಗಳ ಹಿಂದೆ ಜಗದೀಶ್ ಶೆಟ್ಟರ್ ಅವರಿಗೆ ಎನಾಗಿತ್ತು.ಇದೀಗ ಯಾಕೆ ಪಕ್ಷವನ್ನು ಬಿಟ್ಟಿದ್ದಾರೆ ಎಂಬುದಕ್ಕೆ ಮೊದಲು ಉತ್ತರಿಸಲಿ, ಆಮೇಲೆ ನಾನು ಪ್ರತಿಕ್ರಿಯೆ ನೀಡುತ್ತೇನೆ. 6 ತಿಂಗಳಲ್ಲಿ ನಾವು ನಿಮಗೆ ಏನು ಅನ್ಯಾಯ ಮಾಡಿದ್ವಿ? ಎಂದು ಪ್ರಶ್ನಿಸಿದ ಅವರು, ರಾಮ ಮಂದಿರ ಕುರಿತು 135 ವರ್ಷಗಳಿಂದ ಇರುವ ಪಾರ್ಟಿ ಸ್ಟಾಂಡ್ ಈಗಲೂ ಅದೇ ಇದೆ ಎಂದು ಹೇಳಿದರು.