ಛತ್ತೀಸ್‌ಗಢ ನಲ್ಲಿ ಗೆಲುವಿಗೆ ಕಾಂಗ್ರೆಸ್ ಪ್ಲಾನ್: ರೈತರೊಂದಿಗೆ ಭತ್ತ ಕಟಾವು ಮಾಡಿದ ರಾಹುಲ್​ ಗಾಂಧಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌‌ 

ಛತ್ತೀಸ್‌ಗಢ ನಲ್ಲಿ ಮತ್ತೆ ಅಧಿಕಾರಕ್ಕೇರಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದ್ದು, ಇದಕ್ಕಾಗಿ ರಾಹುಲ್​ ಗಾಂಧಿ ಅವರು ಜನರೊಂದಿಗೆ ಬೆರೆಯುವುದನ್ನು ಮುಂದುವರಿಸಿದ್ದಾರೆ.
ಛತ್ತೀಸ್​ಗಢದಲ್ಲಿ ಪ್ರಚಾರ ನಡೆಸುತ್ತಿರುವ ರಾಹುಲ್, ಅಲ್ಲಿನ ರೈತರೊಂದಿಗೆ ಬೆಳೆ ಕಟಾವು ಮಾಡುವ ಮೂಲಕ ಗಮನ ಸೆಳೆದರು.

ರಾಜಧಾನಿ ರಾಯ್​ಪುರದ ಸಮೀಪದಲ್ಲಿರುವ ಕಥಿಯಾ ಗ್ರಾಮಕ್ಕೆ ಭೇಟಿ ನೀಡಿದ ಅವರು, ಭತ್ತದ ಗದ್ದೆಗಳಲ್ಲಿ ಬೆಳೆ ಕೊಯ್ಲು ಮಾಡುತ್ತಿದ್ದ ರೈತರ ಜೊತೆ ಸೇರಿಕೊಂಡ ಬೆಳೆ ಕಟಾವು ಮಾಡಿದರು. ಬಳಿಕ ಅವರ ಜೊತೆ ಸಂವಾದ ನಡೆಸಿದರು.

ರೈತರೊಂದಿಗೆ ರಾಹುಲ್​ ಗಾಂಧಿ ಗದ್ದೆಯಲ್ಲಿ ಕೆಲಸ ಮಾಡುತ್ತಿರುವ ಚಿತ್ರಗಳನ್ನು ಕಾಂಗ್ರೆಸ್​ ತನ್ನ ಎಕ್ಸ್​ (ಟ್ವಿಟರ್​) ಖಾತೆಯಲ್ಲಿ ಹಂಚಿಕೊಂಡಿದೆ. ರಾಹುಲ್​ ಭತ್ತವನ್ನು ಕೊಯ್ಲು ಮಾಡುತ್ತಿರುವುದು ಮತ್ತು ರೈತರೊಂದಿಗೆ ಮಾತುಕತೆ ನಡೆಸಿದ್ದು, ಕಾಂಗ್ರೆಸ್​ ನಾಯಕನ ಜೊತೆಗೆ, ಮುಖ್ಯಮಂತ್ರಿ ಭೂಪೇಶ್ ಬಘೇಲ್, ಉಪಮುಖ್ಯಮಂತ್ರಿ ಟಿಎಸ್ ಸಿಂಗ್ ದೇವು ಗಾಂಧಿ ಸೇರಿದಂತೆ ಇತರರು ಜೊತೆಗಿದ್ದರು.

ರಾಹುಲ್​ ಗಾಂಧಿ ಅದರ ಚಿತ್ರಗಳನ್ನು ತಮ್ಮ ಎಕ್ಸ್​ ಖಾತೆಯಲ್ಲಿಯೂ ಹಂಚಿಕೊಂಡಿದ್ದಾರೆ. ರೈತರು ಸಂತೋಷವಾಗಿದ್ದರೆ ದೇಶ ಖುಷಿಯಾಗಿರುತ್ತದೆ. ಛತ್ತೀಸ್‌ಗಢದ ರೈತರಿಗೆ ಕಾಂಗ್ರೆಸ್ ಸರ್ಕಾರ 5 ಉತ್ತಮ ಯೋಜನೆಗಳನ್ನು ನೀಡಿದೆ. ಇದರಿಂದ ಅವರು ದೇಶದಲ್ಲಿಯೇ ಉತ್ತಮ ಸ್ಥಿತಿಯಲ್ಲಿದ್ದಾರೆ. ಪ್ರತಿ ಕ್ವಿಂಟಾಲ್​ ಭತ್ತಕ್ಕೆ 2,640 ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ)ಯನ್ನು 26 ಲಕ್ಷ ರೈತರಿಗೆ 23 ಸಾವಿರ ಕೋಟಿ ರೂಪಾಯಿ ಸಬ್ಸಿಡಿ, 19 ಲಕ್ಷ ರೈತರ 10 ಸಾವಿರ ಕೋಟಿ ರೂ.ಗಳ ಸಾಲ ಮನ್ನಾ, ವಿದ್ಯುತ್​ ಬಿಲ್​ ದರ ಅರ್ಧದಷ್ಟು ಕಡಿತ, 5 ಲಕ್ಷ ಕೃಷಿ ಕಾರ್ಮಿಕರಿಗೆ ವರ್ಷಕ್ಕೆ 7 ಸಾವಿರ ರೂಪಾಯಿ ನೀಡಿರುವುದು ಉತ್ತಮ ಯೋಜನೆಗಳಾಗಿವೆ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here