ಹೊಸದಿಗಂತ ಡಿಜಿಟಲ್ ಡೆಸ್ಕ್:
2019ರ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ನನ್ನ ಕಾರಿನ ಮೇಲೆ ಗುಂಡು ಹಾರಿಸಲು ಯತ್ನಿಸಿತ್ತು ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. “ನಾನು ಕಾಂಗ್ರೆಸ್ ಅನ್ನು ದೂಷಿಸುತ್ತೇನೆ ಎಂದು ಭಾವಿಸಬೇಡಿ. ಗಾಂಧಿ ಕುಟುಂಬದ ಬಗ್ಗೆ ಮತದಾರರಿಗಷ್ಟೇ ಅಲ್ಲ ಪತ್ರಕರ್ತರಿಗೂ ಭಯ ಇತ್ತು” ಎಂದರು.
ಅಮೇಥಿಯಲ್ಲಿ ಈ ಹಿಂದೆ ಬೂತ್ ವಶಪಡಿಸಿಕೊಳ್ಳುವಿಕೆ ಹಾಗೂ ರಾಜಕೀಯ ಹಿಂಸಾಚಾರ ನಡೆದಿವೆ ಮತ್ತು ಅಂತಹ ಘಟನೆಗಳು ವರದಿಯಾಗದಂತೆ ಗಾಂಧಿ ಕುಟುಂಬವು ನೋಡಿಕೊಂಡಿದೆ ಎಂದು ಅವರು ಆರೋಪಿಸಿದರು. ಬಿಜೆಪಿ ಸಂಸದೆ ಮೇನಕಾ ಗಾಂಧಿ ಅವರ ಮೇಲೂ ಕಾಂಗ್ರೆಸ್ ಕಿಡಿಗೇಡಿಗಳು ಹಲ್ಲೆ ನಡೆಸಿದ್ದಾರೆ. ರಾಜೀವ್ ಗಾಂಧಿ ವಿರುದ್ಧ ಅಮೇಥಿಯಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸುವುದು ಸುಲಭವಾಗಿರಲಿಲ್ಲ, ಕಾಂಗ್ರೆಸ್ನಿಂದ ಹಲ್ಲೆಗೊಳಗಾಗಿದ್ದರು.
ಗ್ಲಾಮರ್ ಪ್ರಪಂಚದಿಂದ ರಾಜಕೀಯಕ್ಕೆ ಪ್ರವೇಶಿಸಲು ತಾನು ನಡೆಸಿದ ಹೋರಾಟದ ಬಗ್ಗೆ ಮಾತನಾಡುತ್ತಾ, ರಾಹುಲ್ ಗಾಂಧಿ ರೀತಿಯ ಹಿನ್ನೆಲೆ ಹೊಂದಿಲ್ಲ ಎಂದರು.