ಗುಜರಾತ್ ಚುನಾವಣಾ ಪ್ರಚಾರಕರ ಲಿಸ್ಟ್ ಬಿಡುಗಡೆಗೊಳಿಸಿದ ಕಾಂಗ್ರೆಸ್: ಶಶಿ ತರೂರ್ ಔಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೇಶದ ಚಿತ್ತ ಈಗ ಪ್ರಧಾನಿ ಮೋದಿ ತವರು ರಾಜ್ಯ ಗುಜರಾತ್ ಮೇಲೆ ಇದ್ದು,ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಗೊಂಡ ಬಳಿಕ ಎಲ್ಲ ರಾಜಕೀಯ ಪಕ್ಶಗಳಿಂದ ಸಕಲ ಸಿದ್ದತೆಗಳು ನಡೆಯುತ್ತಿದೆ.

ಈಗಾಗಲೇ ಬಿಜೆಪಿ ಗುಜರಾತ್ ಚುನಾವಣೆಯಲ್ಲಿ ಮತ್ತೆ ಅಧಿಕಾರಕ್ಕೆ ಬರುವ ವಿಶ್ವಾಸದಲ್ಲಿದು, ಸ್ಟಾರ್ ಪ್ರಚಾರಕರ ಪಟ್ಟಿಯನ್ನು ರಿಲೀಸ್ ಮಾಡಿತ್ತು. ಇದೀಗ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಲಿಸ್ಟ್ ಬಿಡುಗಡೆ ಮಾಡಿದೆ.

ಪಕ್ಷದ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಸೇರಿದಂತೆ ಹಲವರು ಸ್ಟಾರ್ ಪ್ರಚಾರಕರ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ ಪಕ್ಷಕ್ಕೆ ಸೆಡ್ಡು ಹೊಡೆದ ಜಿ23 ನಾಯಕರನ್ನು ಹೊರಗಿಡಲಾಗಿದೆ. ಶಶಿ ತರೂರ್, ಆನಂದ್ ಶರ್ಮಾ, ಮನೀಶ್ ತಿವಾರಿ ಸೇರಿದಂತೆ ಹಲವು ನಾಯಕರನ್ನು ಹೊರಗಿಡಲಾಗಿದೆ.

ಕಾಂಗ್ರೆಸ್ಅಧ್ಯಕ್ಷರ ಚುನಾವಣೆಯಲ್ಲಿ ಸ್ಪರ್ಧಿಸಿದ ಶಶಿ ತರೂರ್ ಮಲ್ಲಿಕಾರ್ಜನ ಖರ್ಗೆ ವಿರುದ್ಧ ಸೋಲು ಕಂಡಿದ್ದರು. ಬಳಿಕ ಕಾಂಗ್ರೆಸ್ ಮಾತ್ರ ಶಶಿ ತರೂರ್ ಅವರನ್ನು ದೂರವಿಟ್ಟಿದೆ. ಚುನಾವಣೆಗಾಗಿ ಪಕ್ಷ ರಚಿಸಿದ ಯಾವುದೇ ಹೊಸ ಸಮಿತಿಗಳಲ್ಲಿ ಶಶಿ ತರೂರ್‌ಗೆ ಸ್ಥಾನ ಸಿಕ್ಕಿಲ್ಲ.
ಇತ್ತ ಹಿರಿಯ ನಾಯಕ ಆನಂದ್ ಶರ್ಮಾರನ್ನು ಈಗಾಗಲೇ ಕಡೆಗಣಿಸಲಾಗಿದೆ. ಹಿಮಾಚಲ ಪ್ರದೇಶ ಚುನಾವಣೆಯ ಪ್ರಮುಖ ಸಮಿತಿಯಿಂದಲೂ ಆನಂದ್ ಶರ್ಮಾ ರಾಜೀನಾಮೆ ನೀಡಿ ಹೊರಬಂದಿದ್ದರು.

ಕಾಂಗ್ರೆಸ್ ಕಾರ್ಯರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ, ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್, ರಾಜಸ್ಥಾನ ಕಾಂಗ್ರೆಸ್ ಪ್ರಮುಖ ನಾಯಕ ಸಚಿನ್ ಪೈಲೆಟ್, ಚತ್ತೀಸಘಡ ಸಿಎಂ ಭೂಪೇಶ್ ಭಾಗೆಲ್ ಕೂಡ ಸ್ಟಾರ್ ಪ್ರಚಾರಕ ಲಿಸ್ಟ್‌ನಲ್ಲಿ ಸ್ಥಾನ ಪಡೆದಿದ್ದಾರೆ. ಜಿಗ್ನೇಶ್ ಮೇವಾನಿ ಹಾಗೂ ಕನ್ಹಯ್ಯ ಕುಮಾರ್ ಕೂಡ ಸ್ಟಾರ್ ಪ್ರಚಾರಕ ಲಿಸ್ಟ್‌ನಲ್ಲಿ ಸ್ಥಾನ ಪಡೆದಿದ್ದಾರೆ.
ಡಿಸೆಂಬರ್ 1 ಹಾಗೂ 5 ರಂದು ಮತದಾನ ನಡೆಯಲಿದೆ. ಡಿಸೆಂಬರ್ 8 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!