April 22, 2026
Wednesday, April 22, 2026
spot_img

ಬಂಗಾಳದಲ್ಲಿ ಕಾಂಗ್ರೆಸ್ ಒಂದು ಸ್ಥಾನವನ್ನು ಗೆಲುವುದಿಲ್ಲ: ಚುನಾವಣಾ ಅಖಾಡದಲ್ಲಿ ಭವಿಷ್ಯ ನುಡಿದ ಅಮಿತ್​ ಶಾ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಶ್ಚಿಮ ಬಂಗಾಳ ಚುನಾವಣಾ ಕಣ ರಂಗೇರುತ್ತಿದ್ದು, ಕೇಂದ್ರ ಗೃಹ ಸಚಿವ ಅಮಿತ್​ ಶಾ ಅವರು ಇಂದು ಬಿಜೆಪಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ.

ದಮ್​ದಮ್​ನಲ್ಲಿ ಇಂದು ಚುನಾವಣಾ ಪ್ರಚಾರ ನಡೆಸಿದ​ ಶಾ, ಈ ಬಾರಿ ಕಾಂಗ್ರೆಸ್ ಒಂದು ಸ್ಥಾನದಲ್ಲೂ ಗೆಲುವು ಸಾಧಿಸುವುದಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.

ರಾಹುಲ್​ ಗಾಂಧಿ ಅವರೇ, ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವು ಹೀನಾಯವಾಗಿ ಸೋಲಲಿದೆ. ಬಂಗಾಳ ಜೊತೆಗೆ ಅಸ್ಸಾಂ ನಲ್ಲೂ ಶೂನ್ಯ ಸಾಧನೆ ಮಾಡಲಿದ್ದು, ತಮಿಳನಾಡು ಮತ್ತು ಪುದುಚೇರಿಯಲ್ಲಿ ಒಂದಕ್ಕಿ ಗೆಲುವುದೇ ಅನುಮಾನ ಎಂದು ಶಾ ತಿರುಗೇಟು ನೀಡಿದರು.

ಈ ವೇಳೆ ಪ್ರಧಾನಿ ಮೋದಿ ವಿರುದ್ಧ ನಾಲಿಗೆ ಹರಿಬಿಟ್ಟ ಖರ್ಗೆ ವಿರುದ್ಧ ಗುಡುಗಿದ ಶಾ, ರಾಹುಲ್ ಗಾಂಧಿ ಜೊತೆ ಸೇರಿ ಖರ್ಗೆ ಅವರೂ ಕೂಡ ಅವರಂತೆ ಆಗಿದ್ದಾರೆ. ಇದಕ್ಕೆಲ್ಲ ದೇಶದ ಜನರೇ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !