October 15, 2026
Thursday, October 15, 2026
spot_img

ಗಾಯದ ಕಲೆಗಳಿದ್ದರೂ ಬೈಸರನ್‌ ಕಣಿವೆ ಸ್ವರ್ಗವೇ, ಇಲ್ಲಿಗೆ ಸದಾ ಬರುತ್ತೇವೆ ಎಂದ ಪ್ರವಾಸಿಗರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಒಂದು ವರ್ಷದ ಹಿಂದೆ ಕಾಶ್ಮೀರದ ಪಹಲ್ಗಾಮ್‌ನ ಬೈಸರನ್‌ ಕಣಿವೆ ರಕ್ತಸಿಕ್ತವಾಗಿತ್ತು. ಉಗ್ರರ ಗುಂಡೇಟಿಗೆ ಬಲಿಯಾದ ಹಿಂದುಗಳ ರಕ್ತದಿಂದ ಹುಲ್ಲುಗಾವಲು ಕೆಂಪಾಗಿ ಕಾಣಿಸುತ್ತಿತ್ತು. ಪಹಲ್ಗಾಮ್‌ ಅಟ್ಯಾಕ್‌ನ ನಂತರ ಎಷ್ಟೋ ಮಂದಿ ಜಮ್ಮು ಕಾಶ್ಮೀರದ ಕಡೆ ತಲೆ ಹಾಕಿ ಮಲಗೋದಕ್ಕೂ ಭಯ ಪಟ್ಟಿದ್ದರು.

ಭೂಮಿ ಮೇಲೆ ಯಾವ ಜಾಗಕ್ಕಾದ್ರೂ ಹೋಗ್ತೀವಿ ಜಮ್ಮು ಕಾಶ್ಮೀರಕ್ಕೆ ಮಾತ್ರ ಹೋಗೋದಿಲ್ಲ ಎಂದು ಜನ ಹೇಳುತ್ತಿದ್ದರು. ಆದರೆ ಸರ್ಕಾರ ಮಾತ್ರ ಇದು ನಮ್ಮ ಭೂಮಿ, ನಮ್ಮ ಸ್ವರ್ಗ, ನಾವು ನೋಡದಿದ್ದರೆ ಇನ್ಯಾರು ನೋಡ್ತಾರೆ? ನಮ್ಮ ಭೂಮಿಯಲ್ಲಿ ಓಡಾಡುವ ಹಕ್ಕು ನಮ್ಮದೇ! ಅಟ್ಯಾಕ್‌ಗೆ ಪ್ರತಿಯೊಬ್ಬ ಭಾರತೀಯನೂ ಪ್ರತ್ಯುತ್ತರ ನೀಡಬೇಕು. ಇದು ನಿಮ್ಮದಲ್ಲ ನಮ್ಮ ಭೂಮಿ ಎಂದು ತೋರಿಸೋದಕ್ಕೆ ಪಹಲ್ಗಾಮ್‌ಗೆ ಭೇಟಿ ನೀಡಬೇಕು ಎಂದು ಹುರಿದುಂಬಿಸಿತ್ತು.

ಅದಾದ ನಂತರ ನಿಧಾನಕ್ಕೆ ಜನ ಪಹಲ್ಗಾಮ್‌ನತ್ತ ಮುಖ ಮಾಡಿದರು, ಹೊಟೇಲ್‌, ಸ್ಟೇ ಉದ್ಯಮಗಳು ಚೇತರಿಕೆ ಕಂಡವು. ಒಂದು ವರ್ಷದ ನಂತರ ಇದೀಗ ಬೈಸರನ್‌ ಚೆಹರೆಯೇ ಬದಲಾಗಿದೆ. ಅಲ್ಲಲ್ಲಿ ಗಾಯದ ಕಲೆಗಳು ಹಾಗೇ ಉಳಿದಿದ್ದರೂ ಸ್ವರ್ಗ ಸ್ವರ್ಗದಂತೆಯೇ ಇದೆ. ಪ್ರತೀ ವರ್ಷವೂ ನಾವು ಟ್ರಿಪ್‌ ಬರುತ್ತೇವೆ ಎಂದು ಪ್ರವಾಸಿಗರು ಹೇಳುತ್ತಿದ್ದಾರೆ. ಶೇ. ಎಂಬತ್ತರಷ್ಟು ಸ್ಟೇ ಹಾಗೂ ಹೊಟೇಲ್‌ಗಳಲ್ಲಿ ಬುಕ್ಕಿಂಗ್‌ ಆಗಿ ಹೋಗಿದೆ. ಎಲ್ಲವೂ ಮತ್ತೆ ಮೊದಲಿನಂತೆ ಆಗುತ್ತಿದೆ.

Must Read