ಅಟಲ್ ಸುರಂಗದ ಹೆಸರು ಬದಲಾವಣೆ ನಿರ್ಧಾರದಿಂದ ಹಿಂದೆ ಸರಿದ ಕಾಂಗ್ರೆಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಹಿಮಾಚಲ ಪ್ರದೇಶದಲ್ಲಿ ಅಧಿಕಾರಕ್ಕೇರಿದ ಬೆನ್ನೆಲ್ಲೇ ಕಾಂಗ್ರೆಸ್ ಮೋದಿ ಸರ್ಕಾರದ ಮಹತ್ವದ ಅಟಲ್ ಸುರಂಗದ ಹೆಸರು ಬದಲಿಸಿ ಸೋನಿಯಾ ಗಾಂಧಿ ಹೆಸರಿಡಲು ಮುಂದಾಗಿತ್ತು. ಆದರೆ ಬಿಜೆಪಿ ಸೇರಿದಂತೆ ಹಲವರಿಂದ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಈ ನಿರ್ಧಾರವನ್ನು ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರ ಕೈಬಿಟ್ಟಿದೆ.

ಈ ಕುರಿತು ಮಾಹಿತಿ ನೀಡಿದ ಸಿಎಂ ಸುಖ್ವಿಂದರ್ ಸಿಂಗ್ ಸುಖು , ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಬಗ್ಗೆ ಗೌರವವಿದೆ. ಅಟಲ್ ಸುರಂಗದ ಹೆಸರು ಬದಲಿಸುವ ಯಾವುದೇ ಪ್ರಸ್ತಾಪ ಕಾಂಗ್ರೆಸ್ ಸರ್ಕಾರದ ಮುಂದಿಲ್ಲ. ಆದರೆ ಈ ಸುರಂಗ ಮಾರ್ಗಕ್ಕೆ ಸೋನಿಯಾ ಗಾಂಧಿ ಅಡಿಗಲ್ಲು ಹಾಕಿದ್ದರು. ಕಾಂಗ್ರೆಸ್ ಸರ್ಕಾರ ಈ ಯೋಜನೆಯ ರೂಪುರೇಶೆ ಸಿದ್ದಪಡಿಸಿತ್ತು ಹೇಳಿದ್ದಾರೆ.

ಈ ಮಾರ್ಗಕ್ಕೆ ಸೋನಿಯಾ ಗಾಂಧಿ ಭೂಮಿ ಪೂಜೆ ನೆರವೇರಿಸಿದ್ದಾರೆ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಸಹಜವಾಗಿ ಆಕ್ರೋಶ ಹೆಚ್ಚಾಗಿದೆ. ಸೋನಿಯಾ ಗಾಂಧಿ ಹೆಸರಿಡಲು ಕಾರ್ಯಕರ್ತರು ಆಗ್ರಹಿಸಿದ್ದಾರೆ. ಆದ್ರೆ ಬಿಜೆಪಿ ಅವರ ಸೇವೆಯನ್ನು ಮರೆತಿದೆ ಎಂದು ಹೇಳಿದ್ದಾರೆ.

ಅಟಲ್ ಸುರಂಗ ಹೆಸರನ್ನು ಬದಲಿಸುವ ಹೊರಟ ಕಾಂಗ್ರೆಸ್ ವಿರುದ್ಧ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ಸೋನಿಯಾ ಗಾಂಧಿ ಭೂಮಿ ಪೂಜೆ ಮಾಡಿದ್ದಾರೆ ನಿಜ. ಅದು ಬಿಟ್ಟು ಇನ್ನೇನು ಮಾಡಿದ್ದಾರೆ. ಭೂಮಿ ಪೂಜೆ ಬಳಿಕ ಯೋಜನೆ ಕಡೆ ತಿರುಗಿ ನೋಡಿಲ್ಲ. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿದ್ದಾಗ ಈ ಯೋಜನೆಗೆ ಮತ್ತೆ ಚಾಲನೆ ನೀಡಲಾಯಿತುದೀಗ ಅಡಿಗಲ್ಲು ಹಾಕಿದ್ದೇವೆ ಎಂದು ಇಡೀ ಸುರಂಗ ಕ್ರೆಡಿಟ್ ತೆಗೆದುಕೊಳ್ಳಲು ಬಯಸುತ್ತಿದೆ ಎಂದು ಬಿಜೆಪಿ ಹೇಳಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!