ಹಿಮಾಚಲದಲ್ಲಿ 2,000 ಕ್ಕಿಂತ ಕಡಿಮೆ ಮತ ಅಂತರದಲ್ಲಿ 15 ಸ್ಥಾನ ಗೆದ್ದ ಕಾಂಗ್ರೆಸ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಹಿಮಾಚಲ ಪ್ರದೇಶದ 68 ವಿಧಾನಸಭಾ ಸ್ಥಾನಗಳ ಪೈಕಿ 40 ಸ್ಥಾನಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಬಿಜೆಪಿಯಿಂದ ಅಧಿಕಾರವನ್ನು ಕಸಿದುಕೊಂಡಿದೆ. ಹಾಗಿದ್ದರೂ ಬರೋಬ್ಬರಿ 15 ಸ್ಥಾನಗಳಲ್ಲಿ ಬಿಜೆಪಿ ಗೆಲುವಿನ ಅಂತರ 2,000 ಕ್ಕಿಂತ ಕಡಿಮೆ ಇದೆ.
ಭೋರಂಜ್, ಸುಜನ್ಪುರ್, ದಾರಂಗ್, ಬಿಲಾಸ್ಪುರ್, ಶ್ರೀ ನೈನಾ ದೇವಿ, ರಾಂಪುರ, ಶಿಲ್ಲೈ, ಮತ್ತು ಶ್ರೀ ರೇಣುಕಾಜಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷಗಳ ಅಭ್ಯರ್ಥಿಗಳು ಪಡೆದ ಮತಗಳ ವ್ಯತ್ಯಾಸವು 1,000 ಕ್ಕಿಂತ ಕಡಿಮೆ ಇದೆ.
ಭಟ್ಟಿಯತ್, ಬಲ್ಹ್, ಉನಾ, ಜಸ್ವಾನ್ ಪ್ರಾಗ್‌ಪುರ್, ಲಾಹೌಲ್ ಮತ್ತು ಸ್ಪಿತಿ, ಸರ್ಕಾಘಾಟ್ ಮತ್ತು ನಹಾನ್‌ಗಳಲ್ಲಿ ಕೇವಲ 1,000 ರಿಂದ 2,000 ರವರೆಗೆ ಮಾತ್ರವೇ ವ್ಯತ್ಯಾಸವಿದೆ.
ಭೋರಂಜ್‌ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸುರೇಶ್ ಕುಮಾರ್ ಅವರು ಕೇವಲ 60 ಮತಗಳಿಂದ ಗೆದ್ದಿದ್ದಾರೆ. ಇದು ಅತ್ಯಂತ ಕಡಿಮೆ ಗೆಲುವಿನ ಅಂತರವಾಗಿದೆ. ಶ್ರೀ ನೈನಾ ದೇವಿ ಕ್ಷೇತ್ರದಲ್ಲಿ 171 ಮತಗಳ ಮತ್ತು ತ್ರಿಲೋಕ್ ಜಮ್ವಾಲ್ ಬಿಲಾಸ್‌ಪುರದಲ್ಲಿ 276 ಮತಗಳ ಅಂತರದಲ್ಲಿ ಸೋಲಾಗಿದೆ.
ಕಾಂಗ್ರೆಸ್ ಮತ್ತು ಬಿಜೆಪಿ ಕ್ರಮವಾಗಿ 40 ಮತ್ತು 25 ಸ್ಥಾನಗಳನ್ನು ಪಡೆದಿದ್ದರೂ ಮತ ಹಂಚಿಕೆಯಲ್ಲಿನ ವ್ಯತ್ಯಾಸ ಕೇವಲ ಶೇ.0.90 ಮಾತ್ರವೇ ಇರುವುದು ಮತದಾರ ಬಿಜೆಪಿಯನ್ನು ತರಸ್ಕರಿಸಿಲ್ಲ, ಕೇವಲ ಸ್ಥಾನಗಳಲಷ್ಟೇ ವ್ಯತ್ಯಾಸವಾಗಿದೆ ಎಂಬ ವಿಚಾರವನ್ನು ಸ್ಪಷ್ಟಪಡಿಸುತ್ತಿದೆ.
ಗುರುವಾರ ಇಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಬಿಜೆಪಿ ಹಿಂದಿನ ಮುಖ್ಯಮಂತ್ರಿ ಠಾಕೂರ್, “ನೀವು  ಮತ ಹಂಚಿಕೆಯನ್ನು ನೋಡಿದರೆ, ವ್ಯತ್ಯಾಸವು ಕೇವಲ ಶೇಕಡಾ 1 ರಷ್ಟಿದೆ. ಅದರ ಹೊರತಾಗಿಯೂ, ಕಾಂಗ್ರೆಸ್ ಅನೇಕ ಸ್ಥಾನಗಳಲ್ಲಿ ಗೆಲುವು ದಾಖಲಿಸಿದೆ. ಆದರೆ ನಾವು ಜನಾದೇಶವನ್ನು ಗೌರವಿಸುತ್ತೇವೆ” ಎಂದು ಹೇಳಿದ್ದಾರೆ. ಬಿಜೆಪಿಯಿಂದ ಏನು ತಪ್ಪಾಗಿದೆ ಎಂದು ಕೇಳಿದಾಗ, ಸೋಲಿಗೆ ಕಾರಣಗಳನ್ನು ನಂತರ ವಿಶ್ಲೇಷಿಸಲಾಗುವುದು ಎಂದು ಠಾಕೂರ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!