Monday, June 27, 2022

Latest Posts

ತಮ್ಮ ಆರೋಪಗಳಿಗೆ ದಾಖಲೆ ಕೇಳಿದರೆ ಕಾಂಗ್ರೆಸ್ಸಿಗರು ಓಡಿಹೋಗುತ್ತಾರೆ: ಆರಗ ಜ್ಞಾನೇಂದ್ರ ಲೇವಡಿ

ಹೊಸದಿಗಂತ ವರದಿ, ಕಲಬುರಗಿ
ಪಿಎಸ್ಐ ನೇಮಕಾತಿ ಪರೀಕ್ಷೆ ಹಗರಣದಲ್ಲಿ ಕೈ ಹಾಕಿರುವರು ಮುಟ್ಟಿಕೊಳ್ಳುವಂತಹ ಉತ್ತರ ನೀಡುತ್ತೇವೆ. ಅವರು ಎಷ್ಟೇ ದೊಡ್ಡವರಿದ್ದರೂ ಸರ್ಕಾರ ಬಿಡುವುದಿಲ್ಲ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಗುಡುಗಿದರು.
ಅವರು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಿಎಸ್ಐ ನೇಮಕಾತಿ ಹಗರಣವನ್ನು ಬೇರು ಮಟ್ಟದಿಂದ ತನಿಖೆ ನಡೆಸುತ್ತಿದ್ದು, ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ ಎಂದು ಪುನರುಚ್ಚರಿಸಿದ ಸಚಿವರು, ಕಾಂಗ್ರೆಸ್ಸಿಗರು ಕೆಲ ಸಚಿವರ ತೇಜೋವಧೆ ಮಾಡುತ್ತಿದ್ದಾರೆ. ತನಿಖೆ ಪಾರದರ್ಶಕವಾಗಿ ನಡೆಯುತ್ತಿದ್ದು, ಹಗರಣದಲ್ಲಿ ಪಾಲ್ಗೊಂಡವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಗರಣದಲ್ಲಿ 300 ಕೋಟಿ ಅಲ್ಲ 3000 ಕೋಟಿ ಆರೋಪ ಮಾಡಲಿ. ಮಾತಾಡಲು ಅವರಿಗೆ ವಾಕ್ ಸ್ವಾತಂತ್ರವಿದೆ. ದಾಖಲಾತಿ ಕೊಡಿ ಎಂದರೆ ಕಾಂಗ್ರೆಸ್ ಅವರು ಓಡಿಹೋಗುತ್ತಾರೆ. ಈ ಪ್ರಕರಣದಲ್ಲಿ ಬಹುತೇಕ ಸಿಲುಕಿದವರೇ ಕಾಂಗ್ರೆಸ್ ನವರು. ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ ಎಂದು ವಿವರಣೆ ನೀಡಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss