Thursday, March 23, 2023

Latest Posts

ಮಾರ್ಚ್‌ 7ರಂದು ಮೇಘಾಲಯದ ಸಿಎಂ ಆಗಿ ಕಾನ್ರಾಡ್‌ ಸಂಗ್ಮಾ ಪ್ರಮಾಣವಚನ!

ಹೊಸದಿಗಂತ ಡಿಜಿಟಲ್ ಡೆಸ್ಕ್‌ :

ಮೇಘಾಲಯ ಚುನಾವಣೆಯಲ್ಲಿ ಬೃಹತ್‌ ಪಕ್ಷವಾಗಿ ಹೊರಹೊಮ್ಮಿರುವ ನ್ಯಾಷನಲ್‌ ಪೀಪಲ್ಸ್‌ ಪಾರ್ಟಿಯ (NPP) ಕಾನ್ರಾಡ್‌ ಸಂಗ್ಮಾ (Conrad Sangma) ಮಾರ್ಚ್‌ 7ರಂದು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.

ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ಭಾಗವಹಿಸಲಿದ್ದಾರೆ ಎಂದು ತಿಳಿದುಬಂದಿದೆ.

ಕಾನ್ರಾಡ್‌ ಸಂಗ್ಮಾ ಅವರ ಎನ್‌ಪಿಪಿಯು ವಿಧಾನಸಭೆಯ ಒಟ್ಟು 60 ಕ್ಷೇತ್ರಗಳ ಪೈಕಿ 26 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ಬಹುಮತ ಸಾಬೀತಿಗೆ 31 ಶಾಸಕರು ಬೇಕಾಗಿದೆ. ಆದರೆ, ಸಂಗ್ಮಾ ಅವರು ತಮ್ಮ ಪರ 32 ಶಾಸಕರಿದ್ದಾರೆ. ಹಾಗಾಗಿ, ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದೇನೆ ಎಂಬುದಾಗಿ ತಿಳಿಸಿದ್ದಾರೆ. ಬಿಜೆಪಿಯು ಇಬ್ಬರು ಶಾಸಕರನ್ನು ಹೊಂದಿದೆ.

ರಾಜ್ಯಪಾಲ ಫಾಗು ಚೌಹಾಣ್‌ ಅವರಿಗೆ ಕಾನ್ರಾಡ್‌ ಸಂಗ್ಮಾ ಅವರು ರಾಜೀನಾಮೆ ನೀಡಿದ್ದಾರೆ. ಸರ್ಕಾರ ರಚನೆಗೆ ಹಕ್ಕು ಮಂಡಿಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!