ಹೊಸದಿಗಂತ ವರದಿ ಬಾಗಲಕೋಟೆ :
ನಗರದ ಮುಚಖಂಡಿ ಕ್ರಾಸ್ ಸಮೀಪ ಇರುವ ಬಾಗಲಕೋಟೆ ಸಿಮೆಂಟ್ ಕಾರ್ಖಾನೆ ಬಳಿಯ ರಸ್ತೆಯ ಪಕ್ಕದಲ್ಲಿ ಪಂಚಮುಖಿ ಆಂಜನೇಯ ಪ್ರಾಣದೇವರ ಮೂರ್ತಿ ಮೆರವಣಿಗೆ ಹಾಗೂ ಶೋಭಾ ಯಾತ್ರೆ ಜ.18 ರಂದು ನೆರವೇರಲಿದೆ ಎಂದು ಮಾರುತೇಶ್ವರ ದೇವಸ್ಥಾನ ಸೇವಾ ಸಂಘದ ಅಧ್ಯಕ್ಷ ಬಸವರಾಜ ಕಟಗೇರಿ ತಿಳಿಸಿದರು.
ನವನಗರ ಪತ್ರಿಕಾಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಯಚೂರ -ಬಾಚಿ ರಸ್ತೆಯಲ್ಲಿ ದ್ದ ಮಾರುತೇಶ್ವರ ದೇವಸ್ಥಾನ ರಸ್ತೆ ಅಗಲೀಕರಣ ಸಂದರ್ಬದಲ್ಲಿ ಸ್ಥಳಾಂತರಿಸಲಾಯಿತು. ಈಗ ದೇವಸ್ಥಾನ ಅಂದಾಜು 40 ಲಕ್ಷ ರೂ.ಗಳಲ್ಲಿ ನಿರ್ಮಾಣ ಆಗಿದೆ ಎಂದರು.
ದೇವಸ್ಥಾನ ನಿರ್ಮಾಣ ಸಂದರ್ಭದಲ್ಲಿ ಎಲ್ಲ ವರ್ಗದವರು ಕೈ ಜೋಡಿಸಿದ್ದಾರೆ. ಸಾಕಷ್ಟು ದಾನಿಗಳು ತಮ್ಮ ಹೆಸರು ಹೇಳದೇ ಲಕ್ಷಾಂತರ ರೂ.ದೇಣಿಗೆ ನೀಡಿದ್ದಾರೆ ಎಂದರು. ಅಯೋಧ್ಯೆ ಯಲ್ಲಿ ರಾಮಂದಿರ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿದ ದಿನದಂದೇ ಪಂಚಮುಖಿ ಆಂಜನೇಯ ದೇವಸ್ಥಾನ ನಿರ್ಮಾಣ ಕಾಮಗಾರಿಗೆ ಪೂಜೆ ಮಾಡಲಾಯಿತು. ಈಗ ಅಯೋಧ್ಯೆಯಲ್ಲಿ ರಾಮ ಮಂದಿರದಲ್ಲಿ ಉದ್ಘಾಟನಾ ಸಮಾರಂಭದ ದಿನವೇ ಇಲ್ಲಿ ಯ ಪಂಚಮುಖಿ ಆಂಜನೇಯ ದೇವಸ್ಥಾನ ಲೋಕಾರ್ಪಣೆಯಾಗಲಿದೆ ಎಂದರು.
ಸ್ವಾಗತ ಸಮಿತಿ ಅಧ್ಯಕ್ಷ ರವಿ ಕುಮಟಗಿ ಮಾತನಾಡಿ, ಪಂಚಮುಖಿ ಆಂಜನೇಯ ಪ್ರಾಣದೇವರ ಮೂರ್ತಿ ಪ್ರತಿಷ್ಠಾಪನೆ ನಿಮಿತ್ತ ಜ.18 ರಂದು ಬಾಗಲಕೋಟೆ ಯ ಕೊತ್ತಲೇಶ್ವರ ದೇವಸ್ಥಾನ( ಕಿಲ್ಲಾ) ದಿಂದ ಮೂರ್ತಿ ಮೆರವಣಿಗೆ ಹಾಗೂ ಭವ್ಯ ಶೋಭಾಯಾತ್ರೆ ನಡೆಯಲಿದೆ.650ಕುಂಭಮೇಳ, ಡೊಳ್ಳು ಕುಣಿತ, ಗೊಂಬೆ ಕುಣಿತ, ಭಜನೆ ಹೀಗೆ ವಿವಿಧ ವಾಧ್ಯಗಳೊಂದಿಗೆ ಭವ್ಯ ಶೋಭಾಯಾತ್ರೆ ನಡೆಯಲಿದೆ ಎಂದರು.
ಜ.22 ರಂದು ಪ್ರಾಣ ಪ್ರತಿಷ್ಠಾಪಣೆ ಹಾಗೂ ಲೋಕಾರ್ಪಣೆ ಜಡೆಯ ಶಾಂತಲಿಂಗ ಸ್ವಾಮೀಜಿ, ಕುಮಾರ ವಿರೂಪಾಕ್ಷ ಸ್ವಾಮೀಜಿ, ಡಾ.ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ಇನ್ನಿತರ ಶ್ರೀಗಳ ಸಾನ್ನಿಧ್ಯದಲ್ಲಿ ನಡೆಯಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನ ಸೇವಾ ಸಂಘದ ಅಧ್ಯಕ್ಷ ಬಸವರಾಜ ಕಟಗೇರಿ ವಹಿಸುವರು.ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪುರ ಉದ್ಘಾಟಿಸುವರು. ಮುಳ್ಯ ಅತಿಥಿಗಳಾಗಿ ಶಾಸಕ ಎಚ್.ವೈ.ಮೇಟಿ, ಮಾಜಿ ಸಚಿವ ಮುರಗೇಶ ನಿರಾಣಿ, ವಿ.ಪ.ಸದಸ್ಯ ಪಿ.ಎಚ್.ಪೂಜಾರ, ಮಾಜಿ ಸಚಿವ ಎಸ್.ಆರ್.ಪಾಟೀಲ ಉಪಸ್ಥಿತಿ ಇರುವರು ಎಂದರು.
ಸ್ವಾಗತ ಸಮಿತಿ ಉಪಾಧ್ಯಕ್ಷ ಸಂತೋಷ ಹೋಕ್ರಾಣಿ, ಕಾರ್ಯದರ್ಶಿ ಅಶೋಕ ಮುತ್ತಿನಮಠ, ಸದಸ್ಯ ಶಿವು ಮೇಲ್ನಾಡ, ವಿಜಯ ಸುಲಾಖೆ, ದೇವಸ್ಥಾನ ಸೇವಾ ಸಂಘದ ಉಪಾಧ್ಯಕ್ಷ ಎಂ.ಆರ್.ಶಿಂಧೆ, ಕಾರ್ಯದರ್ಶಿ ಅರುಣ ಲೋಕಾಪೂರ ಪತ್ರಿಕಾಗೋಷ್ಠಿಯಲ್ಲಿ ದ್ದರು