Saturday, December 2, 2023

Latest Posts

ಈಶ್ವರಪ್ಪ ರಾಜೀನಾಮೆ ಹಿಂದೆ ಪಿತೂರಿ; ವಿ.ಪ ಸದಸ್ಯ ಆಯನೂರು ಮಂಜುನಾಥ್ ಆರೋಪ

ಹೊಸದಿಗಂತ ವರದಿ, ಶಿವಮೊಗ್ಗ
ಸಚಿವ ಸ್ಥಾನಕ್ಕೆ ಈಶ್ವರಪ್ಪ ರಾಜೀನಾಮೆ ನೀಡುವಂತ ಪರಿಸ್ಥಿತಿ ನಿರ್ಮಾಣವಾಗಿರುವುದರ ಹಿಂದೆ ಪಿತೂರಿ ಅಲ್ಲದೇ ಬೇರೇನೂ ಇಲ್ಲ ಎಂದು ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ್ ಅಭಿಪ್ರಾಯಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿ,
ಪಕ್ಷದ ವಿಷಯ ಬಂದಾಗ ಈಶ್ವರಪ್ಪ ಅವರು ಮುಖ-ಮೂತಿ ನೋಡದೇ ಪ್ರತಿ ದಾಳಿ ನಡೆಸುತ್ತಿದ್ದರು. ಇದನ್ನು ಸಹಿಸಿಕೊಳ್ಳಲು ಆಗದೇ ಪಿತೂರಿ ನಡೆಸಲಾಗಿದೆ ಎಂದರು.
ನೈತಿಕತೆ ಆಧಾರದಲ್ಲಿ ಸಚಿವ ಸ್ಥಾನಕ್ಕೆ ಈಶ್ವರಪ್ಪ ಅವರು ರಾಜೀನಾಮೆ ನೀಡಿದ್ದಾರೆ. ಆತ್ಮಹತ್ಯೆ ವೇಳೆ ಒಂದು ಸಂದೇಶ ಕಳಿಸಿದ್ದಾರೆ ಎಂಬ ಒಂದು ಅಂಶ ಬಿಟ್ಟರೆ ಇದರಲ್ಲಿ ಬೇರೆ ಏನೂ ಕಾಣಿಸುತ್ತಿಲ್ಲ. ನೈತಿಕತೆ ಆಧಾರದಲ್ಲಿ ರಾಜೀನಾಮೆ ನೀಡದೇ ಬಹಳ ವರ್ಷಗಳೇ ಆಗಿಹೋಗಿವೆ. ಈಗ ಈಶ್ವರಪ್ಪ ಅವರು ಪಕ್ಷದ ಘನತೆಯನ್ನು ಹೆಚ್ಚಿಸಿದ್ದಾರೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!