ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಚಿವ ಕೆ.ಎನ್ ರಾಜಣ್ಣ ಪುತ್ರ ಎಂಎಲ್‌ಸಿ ರಾಜೇಂದ್ರ ಹತ್ಯೆಗೆ ಸುಪಾರಿ ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಸೋಮ ಮತ್ತು ಅಮಿತ್ ಪೊಲೀಸರ ಮುಂದೆ ಶರಣಾಗಿದ್ದಾರೆ.
ಸದ್ಯ ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸಲಿದ್ದಾರೆ.
ಇನ್ನು ಸೋಮ ಶರಣಾಗುತ್ತಿದ್ದಂತೆ ಮತ್ತೊಬ್ಬ ಆರೋಪಿ ಭರತ ಎಂಬವುನನ್ನು ಪೊಲೀಸರು ಬಂಧಿಸಿದ್ದಾರೆ. ಪೊಲೀಸರನ್ನ ದಿಕ್ಕು ತಪ್ಪಿಸುವುದು ಹಾಗೂ ಸಾಕ್ಷ್ಯ ಸಿಗದಂತೆ ಹತ್ಯೆ ಮಾಡಲು ಸ್ಕೆಚ್ ರೂಪಿಸಿದ್ದು ಈತನೇ ಎನ್ನಲಾಗಿದೆ.
ಆರೋಪಿ ಸೋಮನ ಸ್ನೇಹಿತ ಕಾರ್ಪೆಂಟರ್ ಮನುನನ್ನು ಸಹ ಇಂದು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮನು ಬ್ಯಾಂಕ್ ಖಾತೆ ಮೂಲಕ ಸೋಮ ವ್ಯವಹಾರವನ್ನು ನಡೆಸುತ್ತಿದ್ದ. ಅಲ್ಲದೇ 70 ಲಕ್ಷ ರೂ ಡೀಲ್ ನಲ್ಲಿ ಮುಂಗಡ 5 ಲಕ್ಷ ರೂ ಕಾರ್ಪೆಂಟರ್ ಮನು ಖಾತೆಗೆ ಜಮಾ ಆಗಿತ್ತು ಎನ್ನಲಾಗಿದೆ.