ಹೊಸದಿಗಂತ ವರದಿ,ಮೈಸೂರು:
ನಕಲಿ ದಾಖಲೆ ಸೃಷ್ಟಿಸಿ ಕೋಟ್ಯಾಂತರ ಮೌಲ್ಯದ ಆಸ್ತಿ ಲಪಟಾಯಿಸಲು ಸಂಚು ರೂಪಿಸಿದ ಆರೋಪದ ಮೇಲೆ ಮೈಸೂರು ತಾಲೂಕು ತಹಸೀಲ್ದಾರ್, ಗ್ರಾಮ ಲೆಕ್ಕಿಗ ಹಾಗೂ ರೆವಿನ್ಯೂ ಇನ್ಸೆ÷್ಪಕ್ಟರ್ ಸೇರಿದಂತೆ ಐವರ ವಿರುದ್ದ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಗ್ರಾಮ ಲೆಕ್ಕಿಗ ನಾಗೇಶ್, ರೆವಿನ್ಯೂ ಇನ್ಸೆ÷್ಪಕ್ಟರ್, ತಹಸೀಲ್ದಾರ್, ಜಯಲಕ್ಷಿ÷್ಮÃಬಾಯಿ ಹಾಗೂ ಜಯಶ್ರೀ ಎಂಬುವರ ವಿರುದ್ಧ ಮೈಸೂರಿನ ವಿಜಯನಗರ ನಿವಾಸಿ ಶ್ರೀಕಂಠಪ್ಪ ಎಂಬುವರು ನೀಡಿದ ದೂರಿನ ಮೇಲೆ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಮೈಸೂರು ಗ್ರಾಮ ಕಸಬಾ ಹೋಬಳಿ ಸರ್ವೆ ನಂ 155/2 ರಲ್ಲಿ 2.06 ಗುಂಟೆ ಎಕ್ರೆ ಜಮೀನು ಖರಾಬು ಭೂಮಿಯಾಗಿದ್ದು 1975 ರಲ್ಲಿ ಆರ್.ವೆಂಕಟಪ್ಪ ಎಂಬುವರ ಹೆಸರಿನಲ್ಲಿ ಅನ್ಯಕ್ರಾಂತ ಮಂಜೂರಾಗಿದೆ. ತಿರುಮಲೈ ರೋಲರ್ ಪ್ಲೋರ್ ಮಿಲ್ ಪ್ರೆöÊವೇಟ್ ಲಿಮಿಟೆಡ್ ನ ಅಧಿಕೃತ ನಿರ್ದೇಶಕರಾಗಿದ್ದ ನರಸಿಂಹಣ್ಣ ಎಂಬುವರು ಆರ್.ವೆಂಕಟಪ್ಪ, ವೆಂಕಾರಾಮ್, ಕೃಷ್ಣ ಎಂಬುವರಿAದ 1982 ರಂದು ಖರೀದಿ ಮಾಡಿ ಕ್ರಯಪತ್ರ ಮಾಡಿಸಿ ನೊಂದಣಿ ಮಾಡಿಸಿರುತ್ತಾರೆ. ಆದರೆ ನರಸಿಂಹಣ್ಣ ಅವರು ಮೂಲ ಕ್ರಯಪತ್ರ ಕಂಪನಿಗೆ ಒಪ್ಪಿಸಿಲ್ಲ.1999 ರಲ್ಲಿ ನರಸಿಂಹಣ್ಣ ನಿಧನ ಹೊಂದಿದ್ದಾರೆ.
ಸದರಿ ಜಮೀನಿಗೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ 19,47,400 ರೂ ಪಾವತಿಸಿ ಏಕ ನಿವೇಶನ ಕೈಗಾರಿಕಾ ವಿನ್ಯಾಸ ನಕ್ಷೆ ಅನುಮೋದನೆ ಪಡೆದು ಅನುಮತಿ ಪಡೆಯಲಾಗಿದೆ. ಹೀಗಾಗಿ ಸದರಿ ಕಂಪನಿಯ ಭೂಮಿ ಮೇಲೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಯಾವುದೇ ಹಕ್ಕು ಇರುವುದಿಲ್ಲ. ಆದರೂ ವಿ.ಎ. ನಾಗೇಶ್, ರಾಜಸ್ವ ನಿರೀಕ್ಷಕ ಹಾಗೂ ತಹಸೀಲ್ದಾರ್ ಸೇರಿಕೊಂಡು ದಾಖಲೆಗಳನ್ನ ಸೃಷ್ಟಿಸಿ ನರಸಿಂಹಣ್ಣ ಕುಟುಂಬಸ್ಥರಾದ ಜಯಲಕ್ಷಿ÷್ಮ ಭಾಯಿ, ಜಯಶ್ರೀ ಅವರಿಗೆ ಪೌತಿ ಖಾತೆ ಮಾಡಿದ್ದಾರೆ.
ಕಾನೂನು ಬಾಹಿರವಾಗಿ ಅಕ್ರಮವಾಗಿ ದಾಖಲೆ ಸೃಷ್ಟಿಸಿ ಆಸ್ತಿ ಲಪಟಾಯಿಸಲು ಸಂಚು ರೂಪಿಸಿರುವ ವಿ.ಎ.ನಾಗೇಶ್, ಆರ್.ಐ, ತಹಸೀಲ್ದಾರ್, ಜಯಲಕ್ಷಿ÷್ಮÃಭಾಯಿ, ಜಯಶ್ರೀ ಅವರ ವಿರುದ್ದ ಕ್ರಮ ಕೈಗೊಳ್ಳುವಂತೆ ಶ್ರೀಕಂಠಪ್ಪ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆರೋಪಿಗಳಿಂದ ಜೀವಭಯ ಇದ್ದು ಪೊಲೀಸ್ ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದಾರೆ.