ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಹಾರದಲ್ಲಿ ಸೀತಾ ಮಾತೆಯ ಭವ್ಯ ಮಂದಿರ ನಿರ್ಮಿಸುವುದಾಗಿ ಕೇಂದ್ರ ಸಚಿವ ಅಮಿತ್ ಶಾ ಘೋಷಸಿದ್ದಾರೆ.
ಗುಜರಾತ್‌ನಲ್ಲಿ ಶಾಶ್ವತ ಮಿಥಿಲಾ ಮಹೋತ್ಸವ 2025 ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅಮಿತ್ ಶಾ, ಬಿಹಾರ ಪ್ರದೇಶವು ಪ್ರಾಚೀನ ಕಾಲದಿಂದಲೂ ಪ್ರಜಾಪ್ರಭುತ್ವ ಮತ್ತು ತತ್ವಶಾಸ್ತ್ರವನ್ನು ಸಶಕ್ತಗೊಳಿಸುವ ಐತಿಹಾಸಿಕ ಹಿನ್ನೆಲೆ ಹೊಂದಿದೆ. ಇಲ್ಲಿ ಸೀತಾ ಮಾತೆಯ ಭವ್ಯ ಮಂದಿರ ನಿರ್ಮಾಣ ಮಾಡುವುದಾಗಿ ಭರವಸೆ ನೀಡಿದರು. ಬಿಜೆಪಿಯ ಈ ನಡೆಯನ್ನು ಜೆಡಿಯು ಮತ್ತು ಎಲ್‌ಜೆಪಿ ಸೇರಿದಂತೆ ಮಿತ್ರಪಕ್ಷಗಳು ಸ್ವಾಗತಿಸಿವೆ.
ಲೋಕಸಭೆ ಚುನಾವಣೆ ಸಂದರ್ಭ ಬಿಹಾರಕ್ಕೆ ಹೋಗಿದ್ದಾಗ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾಗಿದೆ ಎಂದು ಹೇಳಿದ್ದೆ. ಈಗ ಸೀತಾ ಮಾತೆಯ ಮಂದಿರ ನಿರ್ಮಾಣ ಮಾಡುವ ಕಾಲ ಬಂದಿದೆ. ಈ ದೇವಾಲಯ ಇಡೀ ಜಗತ್ತಿಗೆ ಸ್ತ್ರೀಶಕ್ತಿಯ ಸಂದೇಶವನ್ನು ನೀಡುತ್ತದೆ ಎಂದು ಒತ್ತಿ ಹೇಳಿದರು.