ದೇಶದಲ್ಲಿ ಬಿಳಿ ಅಕ್ಕಿ, ಕೆಂಪು ಅಕ್ಕಿ, ಕಂದು ಅಕ್ಕಿ, ಕಪ್ಪು ಅಕ್ಕಿ ಸೇರಿದಂತೆ ವಿವಿಧ ಪ್ರಕಾರದ ಅಕ್ಕಿ ಬಳಕೆ ಮಾಡಲಾಗುತ್ತದೆ. ಇದರಲ್ಲಿ ಯಾವ ಅಕ್ಕಿಯನ್ನು ಉಪಯೋಗಿಸಿದರೆ ಉತ್ತಮ ಎಂಬ ಪ್ರಶ್ನೆ ಹಲವರಿಗೆ ಕಾಡುತ್ತದೆ. ಪ್ರತಿಯೊಂದು ಅಕ್ಕಿಯೂ ತನ್ನದೇ ಆದ ಪೋಷಕಾಂಶಗಳನ್ನು ಹೊಂದಿರುತ್ತವೆ. ಆದ್ರೆ ಕಪ್ಪು ಅಕ್ಕಿಯಲ್ಲಿ ದೇಹದ ಆರೋಗ್ಯಕ್ಕೆ ಅನೇಕ ಲಾಭಗಳು ದೊರೆಯುತ್ತವೆ.
ಕಪ್ಪು ಅಕ್ಕಿಯಲ್ಲಿರುವ ಆಂಥೋಸಯಾನಿನ್‌ಗಳು ಟೈಪ್- 2 ಮಧುಮೇಹ ತೊಂದರೆ ಇರುವವರಲ್ಲಿ ರಕ್ತದಲ್ಲಿನ ಸಕ್ಕರೆ ಮಟ್ಟ ಕಡಿಮೆ ಮಾಡುತ್ತದೆ ಎಂದು ಹಲವು ಅಧ್ಯಯನಗಳು ದೃಢಪಡಿಸಿವೆ. ಜೊತೆಗೆ ಇಲಿಗಳ ಮೇಲಿನ ಅಧ್ಯಯನಯೊಂದು, ಈ ಗುಣಲಕ್ಷಣಗಳು ಆಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಯಕೃತ್ತಿನ ಸಮಸ್ಯೆಯನ್ನು ಸಹ ಕಡಿಮೆ ಮಾಡುತ್ತದೆ.
ಕಡಿಮೆ ಗ್ಲೈಸೆಮಿಕ್ ಸೂಚ್ಯಂಕ ಹೊಂದಿರುವ ಕಪ್ಪು ಅಕ್ಕಿ ನಿಧಾನವಾಗಿ ಜೀರ್ಣವಾಗುತ್ತದೆ. ಇದು ಶುಗರ್ ಏರಿಕೆ ಮಾಡುವುದಿಲ್ಲ. ಹೆಚ್ಚಿನ ನಾರಿನ ಅಂಶ ಹೊಂದಿರುವುದರಿಂದ ನಾರು ಜೀರ್ಣಕ್ರಿಯೆ ಪ್ರಕ್ರಿಯೆ ಮತ್ತು ಸಕ್ಕರೆ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಬೊಜ್ಜು ಕಡಿಮೆ ಮಾಡುತ್ತದೆ.
ಕಪ್ಪು ಅಕ್ಕಿಯಲ್ಲಿರುವ ಆಂಥೋಸಯಾನಿನ್‌ಗಳು ಕ್ಯಾನ್ಸರ್ ವಿರೋಧಿ ಗುಣಗಳನ್ನು ಹೊಂದಿವೆ. ಇವುಗಳನ್ನು ಸೇವಿಸುವುದರಿಂದ ಕೊಲೊರೆಕ್ಟಲ್ ಕ್ಯಾನ್ಸರ್ ಬರುವ ಅಪಾಯ ಕಡಿಮೆ. ಕಪ್ಪು ಅಕ್ಕಿಯಲ್ಲಿನ ಆಂಥೋಸಯಾನಿನ್‌ಗಳು ಸ್ತನ ಕ್ಯಾನ್ಸರ್ ಕೋಶಗಳ ಬೆಳವಣಿಗೆ ಮತ್ತು ಹರಡುವ ಸಾಮರ್ಥ್ಯ ಕಡಿಮೆ ಮಾಡುತ್ತದೆ.
ಕಪ್ಪು ಅಕ್ಕಿಯಲ್ಲಿ ಉತ್ಕರ್ಷಣ ನಿರೋಧಕಗಳಿವೆ. ಇವುಗಳು ಹೃದಯದ ಆರೋಗ್ಯವನ್ನು ಕಾಪಾಡುತ್ತವೆ. ಇದರಲ್ಲಿರುವ ಫ್ಲೇವನಾಯ್ಡ್‌ಗಳು ಹೃದಯ ಸಮಸ್ಯೆಗಳಿಂದ ಉಂಟಾಗುವ ಸಾವಿನ ಅಪಾಯ ಕಡಿಮೆ ಮಾಡುತ್ತದೆ. ಕಪ್ಪು ಅಕ್ಕಿಯಲ್ಲಿರುವ ಆಂಥೋಸಯಾನಿನ್‌ಗಳು ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಸುಧಾರಿಸುತ್ತದೆ. ಇವುಗಳನ್ನು ಸೇವಿಸುವುದರಿಂದ ಒಳ್ಳೆಯ ಕೊಲೆಸ್ಟ್ರಾಲ್ ಮಟ್ಟ ಸುಧಾರಿಸುತ್ತದೆ.