ಅಲ್‌ ಖೈದಾ ಉಗ್ರರ ಜೊತೆ ಸಂಪರ್ಕ: ಅಸ್ಸಾಂ ನಲ್ಲಿ ಓರ್ವ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಸ್ಸಾಂ ವಿಶೇಷ ಕಾರ್ಯಾಚರಣೆ ಪಡೆ ಅಲ್ ಖೈದಾ (Al Qaeda) ಉಗ್ರರ ಸಂಪರ್ಕದಲ್ಲಿದ್ದ ವ್ಯಕ್ತಿಯೊಬ್ಬನನ್ನು ಅಸ್ಸಾಂನ ಕೊಕ್ರಜಾರ್ ಜಿಲ್ಲೆಯಲ್ಲಿ ಬಂಧಿಸಿದೆ.

ಬಂಧಿತನನ್ನು ಗಾಜಿ ರೆಹಮಾನ್ (35) ಎಂದು ಗುರುತಿಸಲಾಗಿದೆ. ಆರೋಪಿ ಬಾಂಗ್ಲಾದೇಶ ಮೂಲದ ಭಯೋತ್ಪಾದಕ ಸಂಘಟನೆ ಅನ್ಸರುಲ್ಲಾ ಬಾಂಗ್ಲಾ ತಂಡದ (ಎಬಿಟಿ) ಪ್ರಮುಖ ಸದಸ್ಯ ಎಂದು ತಿಳಿದು ಬಂದಿದೆ. ಆತ ಅಲ್‌ ಖೈದಾ ಉಗ್ರರ ಸಂಪರ್ಕದಲ್ಲಿದ್ದನು.

ಅಸ್ಸಾಂನ ವಿಶೇಷ ಕಾರ್ಯಪಡೆ ಆಪರೇಷನ್ ಪರ್ಘಾಟ್ ಅಡಿಯಲ್ಲಿ ಭಯೋತ್ಪಾದಕರನ್ನು ಬಂಧಿಸಲು ಕಾರ್ಯಾಚರಣೆ ನಡೆಸುತ್ತಿದೆ. ಅದರ ಭಾಗವಾಗಿ ರೆಹಮಾನ್ ಬಂಧನವಾಗಿದೆ.

ಭಯೋತ್ಪಾದನಾ ಘಟಕದ ಕನಿಷ್ಠ 12 ಸಹಚರರನ್ನು ಇದುವರೆಗೆ ಬಂಧಿಸಲಾಗಿದೆ. ಈ ತಿಂಗಳ ಆರಂಭದಲ್ಲಿ, ಅಸ್ಸಾಂ ಪೊಲೀಸರು ‘ಸ್ಲೀಪರ್ ಸೆಲ್’ ನೆಟ್‌ವರ್ಕ್ ಮೇಲೆ ದಾಳಿ ನಡೆಸಿದ್ದರು. ಅಲ್ಲಿ ಭಯೋತ್ಪಾದನಾ ಘಟಕದ ಸದಸ್ಯರು ಭಾರತದ ವಿವಿಧ ಭಾಗಗಳಲ್ಲಿ ‘ಸ್ಲೀಪರ್ ಸೆಲ್’ಗಳನ್ನು ರಚಿಸಿ ಹಿಂದೂ ಸಮುದಾಯಕ್ಕೆ ಸೇರಿದ ನಾಯಕರನ್ನು ಹತ್ಯೆ ಮಾಡಲು ಯೋಜಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.‌

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!