ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಳೆದ ಎಂಟು ದಿನಗಳಿಂದ ರಷ್ಯಾ ಉಕ್ರೇನ್ ಮೇಲೆ ಭೀಕರ ದಾಳಿ ನಡೆಸುತ್ತಿದೆ.
ನಾಗರಿಕರು ನಮ್ಮ ಟಾರ್ಗೆಟ್ ಅಲ್ಲ ಎಂದು ರಷ್ಯಾ ಹೇಳುತ್ತಲೇ ಬಂದಿದ್ದು, ಎರಡು ಸಾವಿರಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ.
ಇಂದು ರಷ್ಯಾ ಪಡೆಗಳು ಎರಡು ಉಕ್ರೇನಿಯನ್ ಬಂದರುಗಳಿಗೆ ಮುತ್ತಿಗೆ ಹಾಕಿವೆ. ಉಕ್ರೇನ್‌ನ ಹಲವು ಭಾಗಗಳಲ್ಲಿ ಸಾರಿಗೆ ಸೌಲಭ್ಯ, ಆಸ್ಪತ್ರೆಗಳು, ಶಿಶುವಿಹಾರ, ವಸತಿ ಕಟ್ಟಡಗಳು ನೆಲಸಮಗೊಂಡಿವೆ.
ಉಕ್ರೇನ್ ಇದೀಗ ಎರಡು ಸಾವಿರಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿರುವ ಬಗ್ಗೆ ತುರ್ತು ಸೇವಾ ವಿಭಾಗ ಮಾಹಿತಿ ನೀಡಿದೆ.