ರಷ್ಯಾ – ಉಕ್ರೇನ್‌ ಸಂಘರ್ಷ: 1 ಮಿಲಿಯನ್‌ ನಿರಾಶ್ರಿತರು ಉಕ್ರೇನ್ ನಿಂದ ಪಲಾಯನ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಉಕ್ರೇನ್‌ ನಗರಗಳ ಮೇಲೆ ರಷ್ಯಾ ಮಿಲಿಟರಿ ಪಡೆ ಭೀಕರ ದಾಳಿ ನಡೆಸುತ್ತಿದ್ದು, ಅಪಾರ ಪ್ರಮಾಣದ ಸಾವುನೋವುಗಳು ಸಂಭವಿಸುತ್ತಿವೆ.‌ ಉಕ್ರೇನ್‌ ನ ಒಂದೊಂದೇ ನಗರಗಳು ರಷ್ಯಾದ ವಶವಾಗುತ್ತಿದೆ.
ದೇಶದಲ್ಲಿ ನಡೆಯುತ್ತಿರುವ ಈ ಯುದ್ಧದ ನಡುವೆ ಕಳೆದೊಂದು ವಾರದಲ್ಲಿ1 ಮಿಲಿಯನ್ ನಿರಾಶ್ರಿತರು ಉಕ್ರೇನ್‌ ತೊರೆದಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯು ಗುರುವಾರ ಮಾಹಿತಿ ನೀಡಿದೆ.

ಕಳೆದ ಏಳು ದಿನಗಳಲ್ಲಿ ಯುದ್ಧಪೀಡಿತ ಉಕ್ರೇನ್‌ನಿಂದ ನೆರೆಯ ದೇಶಗಳಾದ ಪೊಲೆಂಡ್‌, ಹಂಗೇರಿ ಮತ್ತು ರೊಮೇನಿಯಾ ಸೇರಿದಂತೆ ಇತರೆ ದೇಶಗಳಿಗೆ ಒಂದು ಮಿಲಿಯನ್ ನಿರಾಶ್ರಿತರು ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯ ಹೈ ಕಮಿಷನರ್ ಫಿಲಿಪ್ಪೊ ಗ್ರಾಂಡಿ ಟ್ವಿಟರ್‌ ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ರಷ್ಯಾವು ಉಕ್ರೇನ್‌ ನಲ್ಲಿ ಸಂಘರ್ಷ ಕೊನೆಗಾಣಿಸಿ ಶಾಂತಿ ಸ್ಥಾಪನೆಗೆ ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!