ಹೊಸ ದಿಗಂತ ಡಿಜಿಟಲ್ ಡೆಸ್ಕ್:
ಗುತ್ತಿಗೆದಾರ ಸಚಿನ್ ಪಾಂಚಾಳ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳಾದ ಮಹಾರಾಷ್ಟ್ರದ ರೌಡಿಶೀಟರ್ ಪ್ರತಾಪ್ ಧೀರ್ ಪಾಟೀಲ್ ಮತ್ತು ಸೊಲ್ಲಾಪುರ ಜಿಲ್ಲಾ ಶಿವಸೇನೆ ಅಧ್ಯಕ್ಷ ಮನೋಜ್ ಸೇಜವಾಲ್ಗೆ ಜೆಎಂಎಫ್ಸಿ ಕೋರ್ಟ್ನಿಂದ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ ಆದೇಶ ಹೊರಡಿಸಲಾಗಿದೆ.
ಸಚಿವ ಪ್ರಿಯಾಂಕ್ ಖರ್ಗೆ ಆಪ್ತ, ಕಲಬುರಗಿ ಪಾಲಿಕೆ ಮಾಜಿ ಸದಸ್ಯ ರಾಜು ಕಪನೂರ್ ಸೇರಿ ಐವರು ಬೀದರ್ನ ಜೈಲು ಸೇರಿದ್ದಾರೆ.
ಪ್ರಕರಣದ ಪ್ರಮುಖ ಆರೋಪಿ ಸಚಿವ ಪ್ರಿಯಾಂಕ್ ಖರ್ಗೆ ಆಪ್ತ ರಾಜು ಕಪನೂರ್ ಅವರಲ್ಲದೆ ಕಲಬುರಗಿ ಕಾಂಗ್ರೆಸ್ ಮುಖಂಡ ನಂದಕುಮಾರ ನಾಗಭುಜಂಗೆ, ಕಲಬುರಗಿ ಜಿಪಂ ಮಾಜಿ ಉಪಾಧ್ಯಕ್ಷ ಗೋರಖನಾಥ್ ಸಜ್ಜನ್, ಆರ್.ಕೆ.ಪಾಟೀಲ್ ಹಾಗೂ ಸತೀಶ ರತ್ನಾಕರ್ ದುಬಲಗುಂಡಿ ಅವರನ್ನು ಸಿಐಡಿ ತಂಡ ಎಂಟು ದಿನಗಳ ಕಾಲ ತಮ್ಮ ಕಸ್ಟಡಿಗೆ ಪಡೆದುಕೊಂಡು ತೀವ್ರ ವಿಚಾರಣೆ ಮಾಡಿತ್ತು.
ಸಿಐಡಿಯವರು ಎಲ್ಲಾ ವಿಚಾರಣೆ ಪೂರ್ಣಗೊಂಡಿದೆ ಎಂದು ಕೋರ್ಟ್ ಹೇಳಿದ ಕಾರಣ ಎಲ್ಲಾ ಐದು ಆರೋಪಿಗಳನ್ನ ಬೀದರ್ ಜೆಎಂಎಫ್ಸಿ ಕೋರ್ಟ್ ಜಡ್ಜ್ ರಾಮಮೂರ್ತಿ ಎನ್. ಅವರು 14 ದಿನಗಳ ಕಾಲ ನ್ಯಾಯಾಂಗ್ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಳೆದ ಡಿ.26ರಂದು ಸಚಿನ್ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಟೆಂಡರ್ ನೀಡುವಲ್ಲಿ ದೋಖಾ, ಪರ್ಸೆಂಟೇಜ್ ಅಕ್ರಮ, ಹಣದ ಬೇಡಿಕೆ, ಕೊಲೆ ಬೆದರಿಕೆ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ರಾಜು ಕಪನೂರ್ ಸೇರಿ 8 ಜನರು ಇದಕ್ಕೆ ಕಾರಣ ಎಂದು ಸಚಿನ್ ಡೆತ್ ನೋಟ್‌ನಲ್ಲಿ ಬರೆದಿದ್ದರು.