May 28, 2026
Thursday, May 28, 2026
spot_img

HEALTH | ಕಾಯಿಲೆಗಳಿಂದ ದೂರ ಇರಬೇಕಾ? ಹಾಗಿದ್ರೆ ಮೊದಲು ಮನಸ್ಸನ್ನು ನಿಯಂತ್ರಣದಲ್ಲಿಡಿ

ಸಾಮಾನ್ಯವಾಗಿ ಮನುಷ್ಯ ನಕರಾತ್ಮಕ ಯೋಚನೆಗಳಿಂದ ತಮ್ಮ ಮನಸ್ಸು ಮತ್ತು ಆರೋಗ್ಯವನ್ನು ಹಾಳು ಮಾಡಿಕೊಳ್ಳತ್ತಾನೆ. ಮನಸ್ಸು ಮತ್ತು ದೇಹದ ನಡುವೆ ಗಾಢವಾದ ಸಂಬಂಧವಿದವಿರುವುದರಿಂದ ಧನಾತ್ಮಕ ದೃಷ್ಟಿಕೋನವು ಶಾರೀರಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಸಕಾರಾತ್ಮಕ ಚಿಂತನೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂಬುದು ನಿಜ. ಹಾಗಾಗಿ ನಾವು ಸಕಾರಾತ್ಮಕವಾಗಿ ಯೋಚಿಸುವು ಬಹಳ ಮುಖ್ಯವಾಗಿರುತ್ತದೆ. ಸಕಾರಾತ್ಮಕ ಚಿಂತನೆ ಹೇಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂಬುದರ ವಿವರಗಳು ಇಲ್ಲಿವೆ

ಸಕಾರಾತ್ಮಕವಾಗಿ ಯೋಚಿಸುವುದರಿಂದ ಮಾನಸಿಕ ಒತ್ತಡ ಕಡಿಮೆಯಾಗುತ್ತದೆ. ಒತ್ತಡ ಕಡಿಮೆ ಇದ್ದಾಗ ದೇಹದಲ್ಲಿ ಕಾರ್ಟಿಸೋಲ್ ಎಂಬ ಹಾರ್ಮೋನ್ ಮಟ್ಟ ಕಡಿಮೆಯಾಗಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಧನಾತ್ಮಕ ಮನೋಭಾವವು ಕಾಯಿಲೆಗಳಿಂದ ಬೇಗನೆ ಚೇತರಿಸಿಕೊಳ್ಳಲು ಮತ್ತು ದೈಹಿಕವಾಗಿ ಹೆಚ್ಚು ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಸಕಾರಾತ್ಮಕ ಆಲೋಚನೆ ಹೊಂದಿರುವವರು ಆರೋಗ್ಯಕರ ಆಹಾರ, ನಿಯಮಿತ ವ್ಯಾಯಾಮ ಮತ್ತು ಉತ್ತಮ ನಿದ್ರೆಗೆ ಹೆಚ್ಚು ಆದ್ಯತೆ ನೀಡುತ್ತಾರೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಸಕಾರಾತ್ಮಕ ಮನಸ್ಥಿತಿಯು ದೇಹದ ಜೀವಕೋಶಗಳನ್ನು ಬಲಪಡಿಸುತ್ತದೆ, ಇದು ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಸಕಾರಾತ್ಮಕವಾಗಿ ಯೋಚಿಸುವುದರಿಂದ ಮನುಷ್ಯರಲ್ಲಿ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಕಡಿಮೆ ಇರುತ್ತದೆ.

ಸಕಾರಾತ್ಮಕ ಚಿಂತನೆಗಳು ಸಾಮಾಜಿಕ ಸಂಪರ್ಕ ಹೊಂದಲು ಸಹಾಯ ಮಾಡುತ್ತದೆ. ಆಗ . ಮಾನಸಿಕವಾಗಿ ನಾವು ಸುರಕ್ಷಿತವಾಗಿದ್ದೇವೆ ಎಂಬ ಭಾವನೆ ಮೂಡಿದಾಗ, ನಮ್ಮ ದೇಹದ ರೋಗನಿರೋಧಕ ಶಕ್ತಿಯೂ ನೈಸರ್ಗಿಕವಾಗಿ ಸುಧಾರಿಸುತ್ತದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !