ವಿವಾದಿತ ಇಸ್ಲಾಮಿಕ್ ಬೋಧಕ ಜಾಕಿರ್ ನಾಯಕ್ ‘X’ ಖಾತೆಗೆ ನಿರ್ಬಂಧ

ಹೊಸದಿಗಂತ ಡಿಜಿಟಲ್ ಡೆಸ್ಕ್: 

ವಿವಾದಿತ ಇಸ್ಲಾಮಿಕ್ ಬೋಧಕ ಝಾಕಿರ್ ನಾಯ್ಕ್ ಅವರ ಸಾಮಾಜಿಕ ಮಾಧ್ಯಮ ವೇದಿಕೆ ‘X’ ಖಾತೆಯನ್ನು ಭಾರತ ತಡೆಹಿಡಿದಿದೆ.

ಪಾಕಿಸ್ತಾನಕ್ಕೆ ಝಾಕಿರ್ ನಾಯ್ಕ್ ಭೇಟಿ ನೀಡಿದ್ದನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ(MEA) ಖಂಡಿಸಿದ್ದು, ಇದರ ಬೆನ್ನಲ್ಲೇ ಈ ಬೆಳವಣಿಗೆ ಸಂಭವಿಸಿದೆ.

ಝಾಕಿರ್ ನಾಯ್ಕ್ ಗೆ ಪಾಕಿಸ್ತಾನದಲ್ಲಿ ಸನ್ಮಾನ ಮಾಡಲಾಗಿದೆ ಎಂಬ ವರದಿಗಳನ್ನು ನಾವು ನೋಡಿದ್ದೇವೆ. ಅಲ್ಲಿ ಅವರನ್ನು ಹೃತ್ಪೂರ್ವಕವಾಗಿ ಸ್ವಾಗತಿಸಲಾಗಿದೆ ಎಂದು ಎಂಇಎ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಪರಾರಿಯಾಗಿರುವ ಭಾರತೀಯನೊಬ್ಬನಿಗೆ ಪಾಕಿಸ್ತಾನದಲ್ಲಿ ಉನ್ನತ ಮಟ್ಟದ ಸ್ವಾಗತ ಸಿಕ್ಕಿರುವುದು ನಮಗೆ ಆಶ್ಚರ್ಯವೇನಿಲ್ಲ. ಇದು ನಿರಾಶಾದಾಯಕ ಮತ್ತು ಖಂಡನೀಯ. ಇದು ಆಶ್ಚರ್ಯವೇನಲ್ಲ ಎಂದು ಅವರು ಹೇಳಿದ್ದಾರೆ.

ನಾಯಕ್ ಅವರ ಪಾಸ್‌ಪೋರ್ಟ್ ಕುರಿತ ಪ್ರಶ್ನೆಗೆ ಜೈಸ್ವಾಲ್, ನಾಯಕ್ ಪಾಕಿಸ್ತಾನಕ್ಕೆ ಯಾವ ಪಾಸ್‌ಪೋರ್ಟ್ ಪ್ರಯಾಣಿಸಿದ್ದಾರೆ ಎಂಬುದರ ಕುರಿತು ಭಾರತಕ್ಕೆ ಸ್ಪಷ್ಟವಾಗಿಲ್ಲ ಎಂದು ಹೇಳಿದರು.

ಪಾಕಿಸ್ತಾನಕ್ಕೆ ಭೇಟಿ
ಮಂಗಳವಾರ ಒಂದು ತಿಂಗಳ ಭೇಟಿಗಾಗಿ ಪಾಕಿಸ್ತಾನಕ್ಕೆ ಸರ್ಕಾರದ ಆಹ್ವಾನದ ಮೇರೆಗೆ ಆಗಮಿಸಿದ ನಾಯಕ್ ಅವರಿಗೆ ರೆಡ್ ಕಾರ್ಪೆಟ್ ಸ್ವಾಗತ ನೀಡಲಾಯಿತು. ನಂತರ ಅವರು ಪ್ರಧಾನಿ ಶೆಹಬಾಜ್ ಷರೀಫ್ ಮತ್ತು ಉಪ ಪ್ರಧಾನಿ ಇಶಾಕ್ ದಾರ್ ಅವರನ್ನು ಭೇಟಿಯಾದರು.ಅವರ ಭೇಟಿಯ ಸಮಯದಲ್ಲಿ, ನಾಯಕ್ ಇಸ್ಲಾಮಾಬಾದ್, ಕರಾಚಿ ಮತ್ತು ಲಾಹೋರ್ ಸೇರಿದಂತೆ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಸಾರ್ವಜನಿಕ ಭಾಷಣಗಳ ಸರಣಿಯನ್ನು ಮಾಡಲಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!