ಪಾಕಿಸ್ತಾನದ ಮಹಿಳೆಯ ಜೊತೆ ಸಂಭಾಷಣೆ: ಬಿಹಾರ ಮೂಲದ ವ್ಯಕ್ತಿಯ ಬಂಧನ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಿಹಾರದ ಬಟಿಂಡಾದಲ್ಲಿ ಅನುಮಾನಾಸ್ಪದವಾಗಿ ಕಂಡುಬಂದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದು, ಈತ ಪಾಕಿಸ್ತಾನದ ಪರ ಬೇಹುಗಾರಿಕೆ ನಡೆಸಿದ ಶಂಕೆ ವ್ಯಕ್ತವಾಗಿದೆ.

ಬಂಧಿತ ವ್ಯಕ್ತಿ ಮೂಲತಃ ಬಿಹಾರದ ಸಮಷ್ಟಿಪುರಕ್ಕೆ ಸೇರಿದಾತ. ಕಳೆದ 10 ವರ್ಷಗಳಿಂದ ಬಟಿಂಡಾದ ಬೀಂಟ್ ನಗರದಲ್ಲಿ ವಾಸಿಸುತ್ತಿದ್ದ. ಆತನನ್ನು ಬಂಧಿಸಿ, ಮೊಬೈಲ್​ ತಪಾಸಣೆ ನಡೆಸಿದಾಗ, ಮಹಿಳೆಯ ಜೊತೆ ಸಂವಹನ ನಡೆಸಿರುವ ಬಗ್ಗೆ ದಾಖಲೆ ಸಿಕ್ಕಿವೆ.

ಪೊಲೀಸರು ನೀಡಿದ ಮಾಹಿತಿಯ ಪ್ರಕಾರ, ಬಟಿಂಡಾದಲ್ಲಿ ಚಪ್ಪಲಿ ಹೊಲಿಯುವ ಕೆಲಸ ಮಾಡುವ ವ್ಯಕ್ತಿಯೊಬ್ಬ, ಅನುಮಾನಾಸ್ಪದವಾಗಿ ಕಂಡುಬಂದ ಹಿನ್ನೆಲೆಯಲ್ಲಿ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗಿದೆ. ಆತನ ಮೊಬೈಲ್​​ನ ವಾಟ್ಸ್ ಆ್ಯಪ್​​ನಲ್ಲಿ ಪಾಕಿಸ್ತಾನಿ ಮಹಿಳೆಯ ಜೊತೆ ಚಾಟ್​ ಮಾಡಿರುವ ಬಗ್ಗೆ ಮಾಹಿತಿ ಇದೆ. ಇದು ಹನಿಟ್ರ್ಯಾಪ್​ ಆಗಿರುವ ಸಾಧ್ಯತೆ ಇದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪಾಕಿಸ್ತಾನದ ಮಹಿಳೆಯ ಜೊತೆ ಆತ ಸಂಭಾಷಣೆ ನಡೆಸಿರುವ ದಾಖಲೆ ಇದೆ. ಆದರೆ, ಅದು 2023ರಲ್ಲಿ ನಡೆಸಿದ ಸಂವಹನವಾಗಿದೆ. ಇದು ಹನಿಟ್ರ್ಯಾಪ್​​ ಆಗಿರುವ ಸಾಧ್ಯತೆಯ ಮೇಲೆ ತನಿಖೆ ನಡೆಯುತ್ತಿದೆ. ಯಾರೋ ವ್ಯಕ್ತಿ ಹುಡುಗಿಯ ಸೋಗಿನಲ್ಲಿ ಆರೋಪಿಯೊಂದಿಗೆ ಸಂದೇಶ ಕಳುಹಿಸುವುದು, ಗೂಗಲ್‌ನಿಂದ ಫೋಟೋಗಳನ್ನು ಡೌನ್‌ಲೋಡ್ ಮಾಡಿ ಕಳುಹಿಸಿರುವ ಅನುಮಾನವಿದೆ. ಬಂಧಿತ ವ್ಯಕ್ತಿಯು ಅನಕ್ಷರಸ್ಥನಾಗಿದ್ದರಿಂದ ಈ ಬಗ್ಗೆ ಆತನಿಗೆ ಮಾಹಿತಿ ಇಲ್ಲ. ಆರೋಪಿಯು ಪಾಕಿಸ್ತಾನದ ಮಹಿಳೆಗೆ ಯಾವುದೇ ಮಾಹಿತಿಯನ್ನು ಕಳುಹಿಸಿದ್ದಾನೆಯೇ, ಇಲ್ಲವೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್​ ಅಧಿಕಾರಿಗಳು ತಿಳಿಸಿದ್ದಾರೆ.

 

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!