Sunday, December 3, 2023

Latest Posts

CRIME| ಮಟನ್‌ ಕಡಿಮೆ ಬಡಿಸಿದರೆಂದು ಜೈಲರ್‌ಗಳಿಗೆ ಥಳಿಸಿದ ಕೈದಿ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಜೈಲಿನಲ್ಲಿ ಕಡಿಮೆ ಮಟನ್ ಕೊಟ್ಟಿದ್ದಕ್ಕೆ ಕೈದಿಯೊಬ್ಬ ಜೈಲರ್‌ಗಳ ಮೇಲೆ ಹಲ್ಲೆ ನಡೆಸಿರುವ ಘಟನೆ ಕೇರಳದ ಪೂಜಾಪುರ ಕೇಂದ್ರ ಕಾರಾಗೃಹದಲ್ಲಿ ನಡೆದಿದೆ. ವಯನಾಡಿನ ಫೈಜಾಸ್ ಮಾದಕ ದ್ರವ್ಯ ಪ್ರಕರಣದಲ್ಲಿ ಬಂಧಿತನಾಗಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ.

ಆಹಾರ ವೇಳಾಪಟ್ಟಿಯ ಭಾಗವಾಗಿ, ಕೈದಿಗಳಿಗೆ ಮಾಂಸವನ್ನು ನೀಡಲಾಗುತ್ತದೆ. ಶನಿವಾರದ ಮೆನುವಿನ ಭಾಗವಾಗಿ, ಎಲ್ಲಾ ಕೈದಿಗಳಿಗೆ ಮಟನ್ ಬೇಯಿಸಲಾಯಿತು. ಆದರೆ, ಕಡಿಮೆ ಮಟನ್ ನೀಡಲಾಗಿದೆ ಎಂದು ಫೈಜಾಸ್ ಜೈಲರ್ ಗಳ ಮೇಲೆ ಹಲ್ಲೆ ನಡೆಸಿದ್ದಾನೆ. ಮಾದಕ ದ್ರವ್ಯ ಪ್ರಕರಣದಲ್ಲಿ ಈಗಾಗಲೇ ಶಿಕ್ಷೆ ಅನುಭವಿಸುತ್ತಿರುವ ಈತನ ವಿರುದ್ಧ ಇದೀಗ ಮತ್ತೊಂದು ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಶನಿವಾರದಂದು ನಾವು ಸಾಮಾನ್ಯವಾಗಿ ಕೈದಿಗಳಿಗೆ ಮಟನ್ ಕರಿ ಬಡಿಸುತ್ತೇವೆ. ಎಲ್ಲರಿಗೂ ಕೊಟ್ಟಂತೆ ಫೈಜಾಸ್ ಗೆ ಕೊಟ್ಟಿದ್ದೇವೆ. ಹೆಚ್ಚು ನೀಡಿಲ್ಲ ಎಂದು ಗಲಾಟೆ ಮಾಡಿ ಕೊಟ್ಟ ಕುರಿ ಮಾಂಸವನ್ನು ಕಸದ ಬುಟ್ಟಿಗೆ ಎಸೆದರು. ಡೆಪ್ಯುಟಿ ಸೂಪರಿಂಟೆಂಡೆಂಟ್ ಮತ್ತು ಕೆಲ ಹಿರಿಯ ಜೈಲು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದರು, ”ಎಂದು ಜೈಲು ಅಧಿಕಾರಿ ತಿಳಿಸಿದ್ದಾರೆ. ಫೈಜಾಸ್ ಇತರ ಕೈದಿಗಳೊಂದಿಗೆ ಜಗಳವಾಡುತ್ತಿದ್ದಕ್ಕೆ ಇದೀಗ ಅವನನ್ನು ವಿಶೇಷ ವಾರ್ಡ್‌ಗೆ ಸ್ಥಳಾಂತರಿಸಲಾಯಿತು ಎಂದು ವಿವರಿಸಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!