ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಡುಗೆ ಸಿಲಿಂಡರ್ ಸೋರಿಕೆಯಿಂದ ಸ್ಪೋಟ ಸಂಭವಿಸಿ ಐದು ಕುರಿಗಳು ಸಾವನ್ನಪ್ಪಿದ ಘಟನೆ ರಾಯಚೂರಿನ ಏಗನೂರು ಗ್ರಾಮದಲ್ಲಿ ಗುರುವಾರ ನಡೆದಿದೆ. ಟಿನ್‌ಶೆಡ್‌ನಲ್ಲಿದ್ದ ದಂಪತಿ ಅಪಾಯದಿಂದ ಪಾರಾಗಿದ್ದಾರೆ.
ಏಗನೂರು ಗ್ರಾಮದ ನರಸಿಂಹಲು ಎಂಬವರು ವಾಸಿಸುವ ಟಿನ್ ಶೆಡ್‌ನಲ್ಲಿ ಘಟನೆ ಸಂಭವಿಸಿದೆ. ಗುಡಿಸಲಿನ ಪಕ್ಕದಲ್ಲಿ ಕಟ್ಟಿಹಾಕಿದ್ದ ಕುರಿಗಳು ಜೀವಂತವಾಗಿ ಮೃತಪಟ್ಟಿವೆ. 40 ಸಾವಿರ ರೂ ನಗದು, 5 ಗ್ರಾಂ ಚಿನ್ನದ ಕಿವಿಯೋಲೆ, ಬೆಳ್ಳಿಯ ಕಾಲ್ಗೆಜ್ಜೆ, ದವಸ-ಧಾನ್ಯಗಳು ಸುಟ್ಟು ಕರಕಲಾಗಿವೆ. ಶೆಡ್‌ನಲ್ಲೇ ಇದ್ದ ನರಸಿಂಹಲು ಹಾಗೂ ಪತ್ನಿ ಪಾರಾಗಿದ್ದಾರೆ.
ಗ್ರಾಮಸ್ಥರು ಬೆಂಕಿ ನಂದಿಸಲು ಹರಸಹಾಸಪಟ್ಟರು. ನಂತರ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಸಂಪೂರ್ಣ ಬೆಂಕಿ ನಂದಿಸಿದರು. ಕಂದಾಯ, ಪಶುಸಂಗೋಪನಾ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.