ಪುಂಡಿ ಗಸಿ ಮಂಗಳೂರಿನ ಜನಪ್ರಿಯ ಮತ್ತು ರುಚಿಕರ ತಿನಿಸು. ಪುಂಡಿ (ಅಕ್ಕಿ ಉಂಡೆ)ಯನ್ನು ಮೃದುವಾಗಿ ತಯಾರಿಸಿ, ಮಸಾಲೆಯಲ್ಲಿ ಬೇಯಿಸುವುದು. ಇದನ್ನು ಬೆಳಗಿನ ತಿಂಡಿ ಅಥವಾ ಸಂಜೆ ತಿಂಡಿಯಾಗಿ ತಿನ್ನಬಹುದು.
ಬೇಕಾಗುವ ಪದಾರ್ಥಗಳು:
ಪುಂಡಿ ತಯಾರಿಸಲು:
ಅಕ್ಕಿ ಹಿಟ್ಟು – 1 ಕಪ್
ನೀರು – 2 ಕಪ್
ಉಪ್ಪು – ರುಚಿಗೆ ತಕ್ಕಷ್ಟು
ತೆಂಗಿನ ತುರಿ – 2 ಟೀ ಚಮಚ
ಎಣ್ಣೆ – 1 ಟೀ ಚಮಚ
ಗಸಿ ತಯಾರಿಸಲು:
ಹುರಿದ ಕೊತ್ತಂಬರಿ ಬೀಜ – 1 ಟೀ ಚಮಚ
ಮೆಣಸಿನ ಪುಡಿ – ½ ಟೀ ಚಮಚ
ಉದ್ದಿನಬೇಳೆ – 1 ಟೀ ಚಮಚ
ಕಡಲೆಬೇಳೆ – 1 ಟೀ ಚಮಚ
ಸೋಂಪು – ½ ಟೀ ಚಮಚ
ಒಣಮೆಣಸಿನಕಾಯಿ – 2
ತೆಂಗಿನ ತುರಿ – ½ ಕಪ್
ಇಂಗು – ಚಿಟಿಕೆ
ಹಸಿಮೆಣಸು – 2
ಉಪ್ಪು – ರುಚಿಗೆ ತಕ್ಕಷ್ಟು
ಕರಿಬೇವು – ಸ್ವಲ್ಪ
ಎಣ್ಣೆ – 1 ಟೀ ಚಮಚ
ಸಾಸಿವೆ – ½ ಟೀ ಚಮಚ
ಮಾಡುವ ವಿಧಾನ:
ಪುಂಡಿ ತಯಾರಿಸುವುದು:
ಒಂದು ಪಾತ್ರೆಯಲ್ಲಿ 2 ಕಪ್ ನೀರು ಕಾಯಿಸಿ, ಉಪ್ಪು ಮತ್ತು ಎಣ್ಣೆ ಹಾಕಿ. ನೀರು ಕುದಿಯಲು ಶುರುವಾದಾಗ, ಅಕ್ಕಿ ಹಿಟ್ಟು ಸೇರಿಸಿ, ಕಡಿಮೆ ಉರಿಯಲ್ಲಿ ಹಿಟ್ಟು ಚೆನ್ನಾಗಿ ಕಲಸಿ, ದಪ್ಪ ಹದಕ್ಕೆ ತರಬೇಕು. ಈಗ ತೆಂಗಿನ ತುರಿ ಸೇರಿಸಿ, ಬಿಸಿ ಸ್ವಲ್ಪ ಆರಿದ ಮೇಲೆ ಉಂಡೆಗಳನ್ನಾಗಿ ಮಾಡಿ 10 ನಿಮಿಷ ಆವಿಯಲ್ಲಿ ಇಡಿ.
ಗಸಿ ತಯಾರಿಸುವುದು:
ಒಂದು ಚಿಕ್ಕ ಪಾನ್ ನಲ್ಲಿ ಕೊತ್ತಂಬರಿ ಬೀಜ, ಮೆಣಸು, ಉದ್ದಿನಬೇಳೆ, ಕಡಲೆಬೇಳೆ, ಸೋಂಪು, ಒಣ ಮೆಣಸು ಹುರಿಯಿರಿ.ಇದಕ್ಕೆ ತೆಂಗಿನ ತುರಿ, ಹಸಿಮೆಣಸು, ಉಪ್ಪು, ಕರಿಬೇವು, ಇಂಗು ಸೇರಿಸಿ, ಸ್ವಲ್ಪ ನೀರು ಹಾಕಿ ರುಬ್ಬಿಕೊಳ್ಳಿ.
ಈಗ ಸಿದ್ಧವಾದ ಪುಂಡಿಗಳನ್ನು ರುಬ್ಬಿದ ಮಿಶ್ರಣಕ್ಕೆ ಸೇರಿಸಿ, 5 ನಿಮಿಷ ಬೇಯಿಸಿದರೆ ರುಚಿಯಾದ ಮಂಗಳೂರು ಶೈಲಿ ಪುಂಡಿ ಗಸಿ ರೆಡಿ.