ಐಸ್ ಕ್ರೀಮ್ ಬಹಳಷ್ಟು ಜನರ ಪ್ರಿಯ ತಿಂಡಿಯಾಗಿದ್ದು, ತಯಾರಿಸಲು ಸಹ ಸುಲಭ. ಆರೋಗ್ಯಕರ ಐಸ್ ಕ್ರೀಮ್ ಮಾಡಲು ಒಟ್ಸ್ ಒಳ್ಳೆಯ ಆಯ್ಕೆ. ಇಲ್ಲಿದೆ ಸರಳವಾದ ಓಟ್ಸ್ ಐಸ್ ಕ್ರೀಮ್ ರೆಸಿಪಿ!
ಬೇಕಾಗುವ ಸಾಮಗ್ರಿಗಳು:
1/2 ಕಪ್ ಓಟ್ಸ್
2 ಕಪ್ ಹಾಲು
1/2 ಕಪ್ ಸಕ್ಕರೆ ಅಥವಾ ಜೇನುತುಪ್ಪ
1/2 ಟೀಚಮಚ ಏಲಕ್ಕಿ ಪುಡಿ
1/2 ಕಪ್ ಗಟ್ಟಿಯಾದ ಹಾಲು /ಹೆವಿ ಕ್ರೀಮ್
1 ಟೀಚಮಚ ವೆನಿಲ್ಲಾ ಎಸೆನ್ಸ್
ಡ್ರೈ ಫ್ರೂಟ್ಸ್
ತಯಾರಿಸುವ ವಿಧಾನ:
ಒಂದು ಪಾತ್ರೆಯಲ್ಲಿ ಹಾಲನ್ನು ಕುದಿಯಿಸಿ. ಅದಕ್ಕೆ ಓಟ್ಸ್ ಸೇರಿಸಿ ಮತ್ತು 5-7 ನಿಮಿಷಗಳವರೆಗೆ ಚೆನ್ನಾಗಿ ಬೇಯಿಸಿ, ತಣ್ಣಗಾಗಲು ಬಿಡಿ, ನಂತರ ಮಿಕ್ಸರ್ ಜಾರಿನಲ್ಲಿ ಬ್ಲೆಂಡ್ ಮಾಡಿ.
ಇದಕ್ಕೆ ಸಕ್ಕರೆ ಅಥವಾ ಜೇನುತುಪ್ಪ, ಏಲಕ್ಕಿ ಪುಡಿ, ಮತ್ತು ವೆನಿಲ್ಲಾ ಎಸೆನ್ಸ್ ಸೇರಿಸಿ. ಈಗ ಈ ಮಿಶ್ರಣಕ್ಕೆ ಗಟ್ಟಿಯಾದ ಹಾಲು /ಹೆವಿ ಕ್ರೀಮ್ ಸೇರಿಸಿ ಮತ್ತು ಚೆನ್ನಾಗಿ ಬ್ಲೆಂಡ್ ಮಾಡಿ.
ಈಗ ತಯಾರಾದ ಮಿಶ್ರಣಕ್ಕೆ ಡ್ರೈ ಫ್ರೂಟ್ಸ್ ಸೇರಿಸಿ, ಐಸ್ ಕ್ರೀಮ್ ಡಬ್ಬಿಯಲ್ಲಿ ಹಾಕಿ 6-8 ಗಂಟೆಗಳ ಕಾಲ ಫ್ರೀಜರ್‌ನಲ್ಲಿ ಇರಿಸಿದರೆ ಓಟ್ಸ್ ಐಸ್ ಕ್ರೀಮ್ ರೆಡಿ.