ನೆನಪಿದೆಯಾ ಬಾಲ್ಯದಲ್ಲಿ ಬಾಳೆಹಣ್ಣನ್ನು ಸಕ್ಕರೆ ಜೊತೆ ಬೆರೆಸಿ ತಿನ್ನುತ್ತಿದ್ದೆವು. ಈಗ ಆರೋಗ್ಯದ ಬಗ್ಗೆ ಕಾಳಜಿ ಜಾಸ್ತಿಯಾಗಿದೆ. ಹೀಗಾಗಿ ಇದರಲ್ಲೇ ಸ್ವಲ್ಪ ವೆರಿಯೇಶನ್ ಮಾಡಿ ಆರೋಗ್ಯಕರ ಹೋಮ್‌ಮೇಡ್ ಬನಾನಾ ಐಸ್ಕ್ರೀಮ್ ಮಾಡಬಹುದು. ಇದು ಕೇವಲ ಎರಡು ನಿಮಿಷದಲ್ಲಿ ತಯಾರಾಗುವ ಮ್ಯಾಜಿಕ್ ರೆಸಿಪಿ!
ಬೇಕಾಗುವ ಸಾಮಗ್ರಿಗಳು:
2 ಹಣ್ಣಾದ ಬಾಳೆಹಣ್ಣುಗಳು
2 ಟೀ ಚಮಚ ಹನಿ
¼ ಚಮಚ ಹಾಲು
½ ಟೀ ಚಮಚ ವನಿಲ್ಲಾ ಎಸೆನ್ಸ್
ತಯಾರಿಸುವ ವಿಧಾನ:
ಮೊದಲಿಗೆ ಬಾಳೆಹಣ್ಣುಗಳನ್ನು ಸಣ್ಣ ತುತ್ತುಗಳಾಗಿ ಕತ್ತರಿಸಿ, 3-4 ಗಂಟೆಗಳ ಕಾಲ ಫ್ರೀಜರ್‌ನಲ್ಲಿ ಇಟ್ಟು ಗಟ್ಟಿಯಾಗಲು ಬಿಡಿ. ಈಗ ಫ್ರೀಜ್ ಮಾಡಿದ ಬಾಳೆಹಣ್ಣುಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ, ಅದಕ್ಕೆ ಹಾಲು , ಹನಿ, ಹಾಗೂ ವನಿಲ್ಲಾ ಎಸೆನ್ಸ್ ಹಾಕಿ ಸ್ಮೂತ್ ಆಗಿ ರುಬ್ಬಿಕೊಳ್ಳಿ.
ಇದನ್ನು ಒಂದು ಬೌಲ್ ಗೆ ಹಾಕಿ ಮತ್ತೆ ಸ್ವಲ್ಪ ಹೊತ್ತು ಫ್ರೀಜ್ ಮಾಡಿದರೆ ಆರೋಗ್ಯಕರ ಬನಾನಾ ಐಸ್ಕ್ರೀಮ್ ರೆಡಿ.