ಸಾಬುದಾನ ಖಿಚಡಿ ನಾರ್ತ್ ಇಂಡಿಯಾದ ಜನಪ್ರಿಯ ತಿಂಡಿ ಆಗಿದ್ದು, ಇದನ್ನು ವಿಶೇಷವಾಗಿ ಉಪವಾಸದ ದಿನಗಳಲ್ಲಿ ಹೆಚ್ಚು ಸೇವಿಸಲಾಗುತ್ತದೆ. ಇದು ತಯಾರಿಸಲು ಬಹಳ ಸುಲಭ. ಇದನ್ನು ಮಾಡೋದು ಹೇಗೆ ಅಂತ ನೋಡೋಣ.
ಬೇಕಾಗುವ ಪದಾರ್ಥಗಳು:
ಸಾಬುದಾನ – 1 ಕಪ್
ಹುರಿದು ಪುಡಿಮಾಡಿದ ಶೇಂಗಾ – ½ ಕಪ್
ಆಲೂಗಡ್ಡೆ – 1 (ಚಿಕ್ಕದು, ಸಣ್ಣ ತುಂಡುಗಳಾಗಿ ಕತ್ತರಿಸಿದ್ದು)
ಹಸಿಮೆಣಸಿನಕಾಯಿ – 2
ಜೀರಿಗೆ – 1 ಟೀಸ್ಪೂನ್
ಕರಿಬೇವು – 5-6 ಎಲೆಗಳು
ಉಪ್ಪು – ರುಚಿಗೆ ತಕ್ಕಷ್ಟು
ಸಕ್ಕರೆ – ½ ಟೀಸ್ಪೂನ್
ಎಣ್ಣೆ ಅಥವಾ ತುಪ್ಪ – 2 ಟೀಸ್ಪೂನ್
ನಿಂಬೆಹಣ್ಣಿನ ರಸ – 1 ಟೀಸ್ಪೂನ್
ಕೊತ್ತಂಬರಿ ಸೊಪ್ಪು – ಸ್ವಲ್ಪ
ತಯಾರಿಸುವ ವಿಧಾನ:
ಮೊದಲು, ಸಾಬುದಾನವನ್ನು 4-5 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಕೊಳ್ಳಿ. ನಂತರ ನೀರನ್ನು ತೆಗೆದು ಅದಕ್ಕೆ ಹುರಿದ ಶೇಂಗಾ ಪುಡಿ ಹಾಕಿ ಕಲಸಿ ಇಟ್ಟುಕೊಳ್ಳಿ.
ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಅಥವಾ ತುಪ್ಪ ಹಾಕಿ, ಜೀರಿಗೆ, ಹಸಿಮೆಣಸು, ಕರಿಬೇವು ಸೇರಿಸಿ ಸ್ವಲ್ಪ ಫ್ರೈ ಮಾಡಿ. ಇದಕ್ಕೆ ಆಲೂಗಡ್ಡೆ ಹಾಕಿ, ಮೃದುವಾಗುವವರೆಗೆ ಚೆನ್ನಾಗಿ ಬೇಯಿಸಿ.
ಈಗ ಒಗ್ಗರಣೆಗೆ ಸಾಬುದಾನ ಮಿಶ್ರಣವನ್ನು ಸೇರಿಸಿ. ಉಪ್ಪು, ಸಕ್ಕರೆ ಹಾಕಿ ಮತ್ತು ಚೆನ್ನಾಗಿ ಕಲಸಿ 4-5 ನಿಮಿಷ ಬೇಯಿಸಿ. ಕೊನೆಯದಾಗಿ, ನಿಂಬೆಹಣ್ಣು ರಸ ಹಾಗೂ ಕೊತ್ತಂಬರಿ ಸೊಪ್ಪು ಸೇರಿಸಿ, ಸಣ್ಣ ಉರಿಯ ಮೇಲೆ 2 ನಿಮಿಷ ಫ್ರೈ ಮಾಡಿದರೆ ಬಿಸಿ ಬಿಸಿ ಸಾಬುದಾನ ಖಿಚಡಿ ರೆಡಿ.