ಮೇಘಾ, ಬೆಂಗಳೂರು
ಲೈಫ್ ಅಲ್ಲಿ ಸಮಯ ನಿರ್ವಹಣೆ ಬಹಳ ಮುಖ್ಯ. ನಿಮ್ಮ ದಿನಚರಿಯನ್ನು ಯೋಜಿಸಿ. ಕೆಲಸಗಳಿಗೆ ಆದ್ಯತೆ ನೀಡಿ. ಅನಗತ್ಯ ಕೆಲಸಗಳಿಗೆ “ಇಲ್ಲ” ಎಂದು ಹೇಳಲು ಕಲಿಯಿರಿ. ನಿಮಗೆ ಬೇಕಾದಷ್ಟು ಸಮಯವನ್ನು ಕೆಲಸಕ್ಕೆ ಹಾಗೂ ವಿಶ್ರಾಂತಿಗೆ ನೀಡಿ.
ಸಮತೋಲಿತ ಆಹಾರ ಸೇವಿಸಿ. ನಿಯಮಿತ ವ್ಯಾಯಾಮ, ಸಾಕಷ್ಟು ನಿದ್ರೆ ಮಾಡಿ. ಧೂಮಪಾನ ಮತ್ತು ಮದ್ಯಪಾನವನ್ನು ಆದಷ್ಟು ತ್ಯಜಿಸಿ.
ಪ್ರತಿದಿನ ಸ್ವಲ್ಪ ಸಮಯ ಧ್ಯಾನ, ಯೋಗಾಸನಗಳನ್ನು ಅಭ್ಯಾಸ ಮಾಡಿ. ಇವು ಮನಸ್ಸನ್ನು ಶಾಂತವಾಗಿರಿಸಲು ಬಹಳ ಸಹಕಾರಿ. ಸಕಾರಾತ್ಮಕವಾಗಿ ಯೋಚಿಸಿ. ನಿಮ್ಮ ಸಾಮರ್ಥ್ಯಗಳ ಮೇಲೆ ನಂಬಿಕೆ ಇಡಿ. ನಕಾರಾತ್ಮಕ ಆಲೋಚನೆಗಳಿಂದ ದೂರಯಿರಿ.
ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಾಕಷ್ಟು ಸಮಯ ಕಳೆಯಿರಿ. ನಿಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಿ. ಸಹಾಯವನ್ನು ಕೇಳಲು ಎಂದಿಗೂ ಹಿಂಜರಿಯಬೇಡಿ. ನಿಮಗೆ ಇಷ್ಟವಾದ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಿ. ಸಂಗೀತ ಕೇಳಿ, ಪುಸ್ತಕ ಓದಿ, ಅಥವಾ ಚಿತ್ರಕಲೆ ಮಾಡಿ. ಇವು ಮನಸ್ಸಿಗೆ ವಿಶ್ರಾಂತಿ ನೀಡುತ್ತವೆ.
ಭೂತಕಾಲದ ಬಗ್ಗೆ ಚಿಂತಿಸಬೇಡಿ ಮತ್ತು ಭವಿಷ್ಯದ ಬಗ್ಗೆ ಹೆಚ್ಚು ಯೋಚಿಸಬೇಡಿ. ಪ್ರಸ್ತುತ ಕ್ಷಣದಲ್ಲಿ ಬದುಕಲು ಪ್ರಯತ್ನಿಸಿ. ಪ್ರತಿಯೊಂದು ಕ್ಷಣವನ್ನು ಆನಂದಿಸಿ.
ಸರಳವಾಗಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕಡೆ ಗಮನ ಕೊಡಿ. ನಿಮ್ಮ ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ. ನಿಮ್ಮ ಸುತ್ತಲಿನವರೊಂದಿಗೆ ಉತ್ತಮ ಸಂಬಂಧವನ್ನು ಕಾಪಾಡಿಕೊಳ್ಳಿ. ನಿಮಗೆ ಇಷ್ಟವಾದ ಕೆಲಸಗಳನ್ನು ಮಾಡಿ. ಒಂದಂತೂ ನಿಜ ಲೈಫ್ ಅಲ್ಲಿ ಯಾವುದು ಆಗ್ಲೇಬೇಕು ಅಂತ ಇರುತ್ತೋ ಅದು ನೀವು ಬೇಡ ಅಂದ್ರು ಆಗೇ ಆಗುತ್ತೆ, ಹಾಗಿದ್ದಾಗ ಟೆನ್ಶನ್, ಯೋಚ್ನೆ ಮಾಡಿ ಯಾವ ಪ್ರಯೋಜನ ಇಲ್ಲ. ಅದಕ್ಕೆ No BP, Be Happy….