ಭಿಂಡಿ ಫ್ರೈ / ಬೆಂಡೆಕಾಯಿ ಫ್ರೈ ಒಂದು ಸುಲಭ ಹಾಗೂ ರುಚಿಕರವಾದ ರೆಸಿಪಿ. ಇದು ಊಟಕ್ಕೆ ಒಳ್ಳೆಯ ಸೈಡ್ ಡಿಶ್ ಆಗಿ ಕೆಲಸ ಮಾಡುತ್ತೆ. ಜೊತೆಗೆ ಇದನ್ನು ಚಪಾತಿ ಅಥವಾ ಪರೋಟಾದೊಂದಿಗೆ ಸವಿಯಬಹುದು.
ಬೇಕಾಗುವ ಸಾಮಗ್ರಿಗಳು:
ಭಿಂಡಿ / ಬೆಂಡೆಕಾಯಿ – 250 ಗ್ರಾಂ
ಎಣ್ಣೆ – 2 ಟೀಚಮಚ
ಹಸಿಮೆಣಸು – 1
ಕರಿಬೇವಿನ ಸೊಪ್ಪು – 5-6 ಇಲೆ
ಅರಿಶಿನ – 1/2 ಟೀಚಮಚ
ಮೆಣಸಿನ ಪುಡಿ – 1 ಟೀಚಮಚ
ಧನಿಯಾ ಪುಡಿ – 1/2 ಟೀಚಮಚ
ಜೀರಿಗೆ ಪುಡಿ – 1/2 ಟೀಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ:
ಮೊದಲು ಬೆಂಡೆಕಾಯಿಯನ್ನು ಚೆನ್ನಾಗಿ ತೊಳೆದು ಒಣಗಿಸಿ, ಉದ್ದವಾಗಿ ಕತ್ತರಿಸಿ.
ನಂತರ ಒಂದು ಬಾಣಲೆಗೆ ಎಣ್ಣೆ ಹಾಕಿ, ಅದಕ್ಕೆ ಕರಿಬೇವಿನ ಸೊಪ್ಪು ಮತ್ತು ಹಸಿಮೆಣಸು ಹಾಕಿ, ಈಗ ಕತ್ತರಿಸಿದ ಬೆಂಡೆಕಾಯಿಯನ್ನು ಸೇರಿಸಿ, ಮಧ್ಯಮ ಉರಿಯಲ್ಲಿ ಬೆಂಡೆಕಾಯಿ ಚನ್ನಾಗಿ ಫ್ರೈ ಮಾಡಿಕೊಳ್ಳಿ. ಅದು ತಿನ್ನಲು ಕ್ರಿಸ್ಪಿ ಆಗಿರಬೇಕು.
ಬೇಕಾದ್ರೆ ಎಣ್ಣೆ ಜಾಸ್ತಿಯಾಗಿದ್ದರೆ ಬಾಣಲೆಯಿಂದ ಸ್ವಲ್ಪ ಎಣ್ಣೆ ತೆಗೆದು ಸೈಡ್ ನಲ್ಲಿ ಇಟ್ಟುಕೊಳ್ಳಿ. ಆಮೇಲೆ ಅದಕ್ಕೆ ಅರಿಶಿನ, ಮೆಣಸಿನ ಪುಡಿ, ಧನಿಯಾ ಪುಡಿ, ಜೀರಿಗೆ ಪುಡಿ ಮತ್ತು ಉಪ್ಪು ಹಾಕಿ, ಚೆನ್ನಾಗಿ ಮಿಕ್ಸ್ ಮಾಡಿದರೆ ರುಚಿಯಾದ ಭಿಂಡಿ / ಬೆಂಡೆಕಾಯಿ ಫ್ರೈ ರೆಡಿ.